

ಪ್ರಮುಖ ಮುಖ್ಯಾಂಶಗಳು
ಕೃಷಿ ಇಲಾಖೆ ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಕಾಫಿ ಬೋರ್ಡ್ ಉಪನಿರ್ದೇಶಕ ಹಾಗೂ ಜಿಲ್ಲೆಯ 5 ತಾಲೂಕುಗಳ ತಹಸೀಲ್ದಾರ್‌ಗಳನ್ನು ಒಳಗೊಂಡ ಅಧಿಕಾರಿಗಳ ತಂಡ ಕೊಡಗಿನಲ್ಲಿ ಮಳೆಯಿಂದ ಆದ ಬೆಳೆಹಾನಿ ಬಗ್ಗೆ ಜಿಲ್ಲಾಧಿಕಾರಿಗೆ ಜಂಟಿ ಸಮೀಕ್ಷಾ ವರದಿ ಸಲ್ಲಿಸಿದ್ದಾರೆ. ಈ ವರದಿ ವಿರೋಧಿಸಿ ಆಕ್ಷೇಪಣೆಗಳು ಸ್ವೀಕೃತ ಆಗಿಲ್ಲ ಎಂದು ಕೊಡಗು ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ. ಜಂಟಿ ಸಮೀಕ್ಷಾ ವರದಿ ಅನ್ವಯ ಡಿಬಿಟಿ ಮೂಲಕ ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಒಟ್ಟು 62,446 ರೂ. ಪರಿಹಾರ ಹಣ ಪಾವತಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ ಜಿಲ್ಲಾಧಿಕಾರಿ ರಚಿಸಿದ್ದ ತಂಡ ಮಳೆಯಿಂದ ಆದ ಬೆಳೆಹಾನಿ ಬಗ್ಗೆ ಸರಿಯಾದ ಸಮೀಕ್ಷೆಯನ್ನೇ ಮಾಡಿಲ್ಲ. ಅವರು ಸಮೀಕ್ಷೆ ಆರಂಭಿಸುವಾಗಲೇ ತಡವಾಗಿತ್ತು. ಹಾಗಾಗಿ ಅಧಿಕಾರಿಗಳಿಗೆ ನಷ್ಟದ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಕಾಫಿ ಮಂಡಳಿಯೂ ಸಮರ್ಪಕವಾಗಿ ವರದಿ ಕೊಟ್ಟಿಲ್ಲ. ನಮ್ಮ ಪಕ್ಷದ ವತಿಯಿಂದ ಸಮೀಕ್ಷೆ ನಡೆಸಿದ್ದ ವೇಳೆ ಕೊಡಗಿನಲ್ಲಿ ಕಾಫಿಗೆ ಭಾರಿ ಹಾನಿ ಆಗಿರುವುದು ಕಂಡು ಬಂದಿತ್ತು. ಕೃಷಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಹಾನಿ ಆಗಿದೆ. ಈ ವರದಿಯನ್ನು ನಾವು ರಾಜ್ಯಮಟ್ಟಕ್ಕೆ ಕಳುಹಿಸಿದ್ದೆವು.