ನಿವೃತ್ತ ಶಿಕ್ಷಕಿಗೆ ಬೀಳ್ಕೊಡುಗೆ

ನಿವೃತ್ತಿ ಹೊಂದಿದ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕಿ ಜಯಶ್ರಿ ಅವರನ್ನು ಎಸ್.ಡಿ.ಎಂ.ಸಿ. ಮತ್ತು ಶಾಲಾ ಶಿಕ್ಷಕರ ವತಿಯಿಂದ ಬಿಳ್ಕೊಡಲಾಯಿತು. ಹೆಚ್.ಕೆ. ಕುಮಾರ್, ಜಗದೀಶ್ ಜೋಡುಬೀಟಿ, ದಿವ್ಯ, ಸತೀಶ್ ಬಿ.ಆರ್., ರಮಾನಂದ ಟಿ.ಡಿ. ಮತ್ತಿತರರು ಇದ್ದರು.
ನಿವೃತ್ತಿ ಹೊಂದಿದ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕಿ ಜಯಶ್ರಿ ಅವರನ್ನು ಎಸ್.ಡಿ.ಎಂ.ಸಿ. ಮತ್ತು ಶಾಲಾ ಶಿಕ್ಷಕರ ವತಿಯಿಂದ ಬಿಳ್ಕೊಡಲಾಯಿತು. ಹೆಚ್.ಕೆ. ಕುಮಾರ್, ಜಗದೀಶ್ ಜೋಡುಬೀಟಿ, ದಿವ್ಯ, ಸತೀಶ್ ಬಿ.ಆರ್., ರಮಾನಂದ ಟಿ.ಡಿ. ಮತ್ತಿತರರು ಇದ್ದರು.
Published on
ಗೋಣಿಕೊಪ್ಪಲು:
ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಎನ್.ಕೆ. ಜಯಶ್ರೀ ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಶುಕ್ರವಾರ ನಡೆದ ಸಮಾರಂಭದಲ್ಲಿ ಬಿಳ್ಕೊಟ್ಟರು. ಈ ಸಂದರ್ಭ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ 20 ವರ್ಷಗಳಿಂದ ಶಾಲೆಯಲ್ಲಿ ವಿದ್ಯಾದಾನ ಮಾಡುವ ಮೂಲಕ ಸರ್ವಶ್ರೇಷ್ಠವಾದ ಕಾರ್ಯ ನಡೆಸಿದ್ದಾರೆ. ನಿವೃತ್ತಿ ಜೀವನ ಅಷ್ಟೇ ಸುಂದರವಾಗಿ ನಡೆಯಲಿ ಎಂದು ಹೇಳಿದರು.
ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರಗಳನ್ನು ಬಿತ್ತುವ ಮೂಲಕ ಅವರ ಸುಂದರ ಜೀವನವನ್ನು ಕಟ್ಟಿಕೊಡುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದಾಗಿದೆ. ಅಂತಹ ಜವಾಬ್ದಾರಿಯನ್ನು ನಿಭಾಯಿಸಿದ ಶಿಕ್ಷಕಿ ಜಯಶ್ರೀ ಅವರ ನಿವೃತ್ತಿ ಜೀವನದ ಬದುಕು ಶಾಂತಿಯುತವಾಗಿ ನಡೆಯಲಿ ಎಂದು ಹಾರೈಸಿದರು.
ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿ ಜಯಶ್ರೀ ಮಾತನಾಡಿ, ಮಕ್ಕಳ ಜತೆಗೆ ಬೆರೆತು ಸಾಕಷ್ಟು ವಿಶೇಷ ಅನುಭವಗಳನ್ನು ಜೀವನದಲ್ಲಿ ಹೊಂದಲಾಗಿದೆ. ನಿವೃತ್ತಿ ಬಗ್ಗೆ ದುಃಖವಿದ್ದರೂ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಜವಾಬ್ದಾರಿಯ ಹೆಮ್ಮೆಯ ಕಿರೀಟ ಧರಿಸಿ ವೃತ್ತಿ ಸಹಜ ನಿವೃತ್ತಿಯನ್ನು ಹೊಂದುತ್ತಿದ್ದೇನೆ ಎಂದು ಹೇಳಿದರು.
ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಮೊದಲು ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಫಲಿತಾಂಶವನ್ನು ಪೋಷಕರು ಗಮನಿಸಿದರು. ತರಗತಿಗಳ ಶಿಕ್ಷಕರು ವಿದ್ಯಾರ್ಥಿಗಳು ಪಡೆದ ಫಲಿತಾಂಶಕ್ಕೆ ಪ್ರೋತ್ಸಾಹಿಸಿದರು.
ಶಾಲೆಯ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ದಿವ್ಯ, ಕಲಾ ಶಿಕ್ಷಕ ಸತೀಶ್ ಬಿ.ಆರ್., ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಟಿ.ಡಿ., ಸಹಾಯಕ ಶಿಕ್ಷಕರುಗಳಾದ ಜೋಸ್ಲಿಯಾ ಎನ್.ಕೆ., ಇಂದಿರಾ ಎಂ.ಸಿ., ಅನಿತಕುಮಾರಿ ಹೆಚ್.ಇ., ದಮಯಂತಿ, ಸಹನ್ ಎಂ.ಬಿ., ಶಾರದ ಕೆ.ಎಸ್, ನಾಗರಾಜು, ಸ್ನೇಹಾ ಕಾವೇರಮ್ಮ, ಸಿದ್ದರಾಜು ಎನ್., ಮಂಜುಳ ವಿ., ಎಸ್‌ಡಿಎಂಸಿ ಸದಸ್ಯರುಗಳು, ಪೋಷಕರು, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net