ಕುಟುಂಬದ ಹಿರಿಯರಾದ ಎಡಿಕೇರಿ ಸೀತಾರಾಮ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಪ್ರಮುಖರಾದ ಎಡಿಕೇರಿ ದೇವಯ್ಯ, ಎಡಿಕೇರಿ ಉತ್ತಪ್ಪ, ಎಡಿಕೇರಿ ಚಂದ್ರಶೇಖರ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು, ಗುರು, ಹಿರಿಯರು ಮತ್ತು ಬಂಧುಬಳಗ ಈ ಸಂದರ್ಭ ಉಪಸ್ಥಿತರಿದ್ದರು. ಪ್ರಸನ್ನ ಅವರನ್ನು ಅಭಿನಂದಿಸಿ ಮಾತನಾಡಿ ಅವರ ಸೇವೆ ಮತ್ತು ಸಾಧನೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂದು ಹಾರೈಸಿದರು.