ಮರ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ

ಮರದೊಡ ಸಮೀಪದ ಡಿಂಜಿ ಮೊಟ್ಟೆ ಎಂಬಲ್ಲಿ ನಡಿಕೇರಿಯಂಡ ಮನೆಯ ಪಕ್ಕದ ರಸ್ತೆಗೆ ಮರ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮರದೊಡ ಸಮೀಪದ ಡಿಂಜಿ ಮೊಟ್ಟೆ ಎಂಬಲ್ಲಿ ನಡಿಕೇರಿಯಂಡ ಮನೆಯ ಪಕ್ಕದ ರಸ್ತೆಗೆ ಮರ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
Published on

ನಾಪೋಕ್ಲು: ನಾಪೋಕ್ಲು- ವಿರಾಜಪೇಟೆ ಮುಖ್ಯ ಸಂಪರ್ಕ ರಸ್ತೆಯಲ್ಲಿ ಶನಿವಾರ ಬೃಹತ್ ಮರ ಬಿದ್ದು ಸುಮಾರು 3 ಗಂಟೆ ಕಾಲ ಸಂಪೂರ್ಣ ರಸ್ತೆ ಸಂಪರ್ಕ ಸ್ಥಗಿತಗೊಂಡು, ಸಾರ್ವಜನಿಕರು ಪರದಾಡಿದರು.


ಮರದೊಡ ಸಮೀಪದ ಡಿಂಜಿ ಮೊಟ್ಟೆ ಎಂಬಲ್ಲಿ ನಡಿಕೇರಿಯಂಡ ಮನೆಯ ಪಕ್ಕದ ರಸ್ತೆಗೆ ಮರ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದರಿಂದಾಗಿ ಪರ್ಯಾಯವಾಗಿ ಕೋಕೇರಿ ರಸ್ತೆಯನ್ನು ವಾಹನಗಳು ಬಳಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಗ್ರಾಮಸ್ಥರು ಮರವನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚೋಯಮಾಡಂಡ ಹರೀಶ್ ಪೊನ್ನಪ್ಪ, ಗಿರೀಶ್ ಪೂವಯ್ಯ, ಮನೋಜ್, ಮೇರಿಯಂಡ ಅಪ್ಪಣ್ಣ, ನಾಚಪ್ಪ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net