ಈಸ್ಟ್ ಕೊಳಕೇರಿ ಬೊಮ್ಮಂಜಿಕೇರಿ ಯ ಮಾನಿವಾಡೆ ಮಂದಿನ ಐತಿಹಾಸಿಕ ಮಂದ್ ಮರ ಬುಡ ಸಮೇತ ಬಿದ್ದು ಸಮಸ್ಯೆ ಎದುರಾಗಿದೆ. ಈ ಮರವು ನೂರಾರು ವರ್ಷ ಹಳೆಯ ಅತಿ ದೊಡ್ಡ ಮಂದ್ ಮರವಾಗಿತ್ತು. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದು ಸುತ್ತಮುತ್ತಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ. ಬೊಮ್ಮಂಜಿಕೇರಿ-ಕೋಟೇರಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.