ಜನರಿಗೆ ಅಗತ್ಯವಿರುವ ಕೊಡುಗೆ ನೀಡಲು ಸೇವೆಗಳನ್ನು ವಿಸ್ತರಿಸಿ

ಕುಶಾಲನಗರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಕೆ.ಎನ್.ಪವನ್ ಕುಮಾರ್, ಕಾರ್ಯದರ್ಶಿಯಾಗಿ ಎಂ.ಜಿ. ಕಿರಣ್, ಖಜಾಂಚಿಯಾಗಿ ಡಾ.ಪಿ.ಸಿ.ರಾಘವೇಂದ್ರ ಅಧಿಕಾರ ಸ್ವೀಕರಿಸಿದರು. ಎಸ್.ಸಂಜಿತ್ ಶೆಟ್ಟಿ, ನಟರಾಜ್ ಕೆಸ್ತೂರು, ನಿತಿನ್ ಎನ್. ಗುಪ್ತ ಮತ್ತಿತರರು ಇದ್ದರು.
ಕುಶಾಲನಗರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಕೆ.ಎನ್.ಪವನ್ ಕುಮಾರ್, ಕಾರ್ಯದರ್ಶಿಯಾಗಿ ಎಂ.ಜಿ. ಕಿರಣ್, ಖಜಾಂಚಿಯಾಗಿ ಡಾ.ಪಿ.ಸಿ.ರಾಘವೇಂದ್ರ ಅಧಿಕಾರ ಸ್ವೀಕರಿಸಿದರು. ಎಸ್.ಸಂಜಿತ್ ಶೆಟ್ಟಿ, ನಟರಾಜ್ ಕೆಸ್ತೂರು, ನಿತಿನ್ ಎನ್. ಗುಪ್ತ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Expand services
ಕುಶಾಲನಗರ: ಕುಶಾಲನಗರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಕೆ.ಎನ್.ಪವನ್ ಕುಮಾರ್, ಕಾರ್ಯದರ್ಶಿಯಾಗಿ ಎಂ.ಜಿ.ಕಿರಣ್, ಖಜಾಂಚಿಯಾಗಿ ಡಾ.ಪಿ.ಸಿ.ರಾಘವೇಂದ್ರ ಆಯ್ಕೆಯಾದರು. ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಮಾಜಿ ಪ್ರಾಂತಪಾಲ ಎಸ್.ಸಂಜಿತ್ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು.
ಎಸ್.ಸಂಜಿತ್ ಶೆಟ್ಟಿ ಮಾತನಾಡಿ, ಸೇವೆಯೇ ಧ್ಯೇಯವಾಗಿರುವ ಲಯನ್ಸ್ ಸಂಸ್ಥೆಯ ಎಲ್ಲ ಸದಸ್ಯರು ಸಂಸ್ಥೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಅತ್ಯುತ್ತಮ ಸೇವಾ ಕಾರ್ಯಕ್ರಮಗಳಿಗೆ ಕುಶಾಲನಗರ ಸಂಸ್ಥೆ ಹೆಸರು ವಾಸಿಯಾಗಿದೆ ಎಂದು ಬಣ್ಣಿಸಿದರು. ಸಮಾಜಕ್ಕೆ ಅಗತ್ಯವಿರುವ ಕೊಡುಗೆಗಳನ್ನು ನೀಡುವ ಮೂಲಕ ತಮ್ಮ ಸೇವೆ ವಿಸ್ತರಿಸಲು ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ವಲಯ ಅಧ್ಯಕ್ಷ ನಟರಾಜ್ ಕೆಸ್ತೂರು, ನೂತನ ಸಮಿತಿ ಉಪಾಧ್ಯಕ್ಷ ನಿತಿನ್ ಎನ್.ಗುಪ್ತ, ನಿರ್ದೇಶಕರಾದ ಡಿ.ಎಸ್.ದಯಾನಂದ, ಹರೀಶ್ ಗಣಪತಿ, ವಿವೇಕ್, ರವಿ, ಕುಮಾರ್, ಮಾಜಿ ಅಧ್ಯಕ್ಷರಾದ ಸಿ.ಆರ್.ನಾಗರಾಜು, ಕೊಡಗನ ಹರ್ಷ, ಕೆ.ಎಸ್.ಸತೀಶ್ ಕುಮಾರ್, ಟಿ.ಕೆ.ರಾಜಶೇಖರ್, ವಿ.ಎಸ್.ಸುಮನ್ ಬಾಲಚಂದ್ರ, ಡಾ.ಪ್ರವೀಣ್, ನಾರಾಯಣ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net