

ಕೊಡವ ಸಂಸ್ಕೃತಿಯ ವೈವಿಧ್ಯತೆಗಳು, ಸಾಮಾಜಿಕ ಸ್ಥಿತಿಗತಿಗಳು, ಪಾರಂಪಾರಿಕ ನೆಲೆಗಟ್ಟು, ನಾಗರಿಕತೆ ಮತ್ತು ಜೀವನಪದ್ಧತಿಗಳ ವಿಕಾಸದ ಸಂಕೀರ್ಣತೆ-ಇತ್ಯಾದಿಗಳನ್ನು ಅರಿಯುವ ನಿಟ್ಟಿನಲ್ಲಿ ಸಮಗ್ರ ಅಧ್ಯಯನವನ್ನು ಕುಲಶಾಸ್ತಿçÃಯ, ಪ್ರಾಥಮಿಕ ಸಂಶೋಧನೆಯ ಮೂಲಕ ಕೈಗೊಳ್ಳುವ ಅಗತ್ಯವಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಕೊಡವ ಭಾಷೆ, ಸಂಸ್ಕೃತಿಯ ಅಳಿಯುಳಿವಿನ ಆತಂಕವನ್ನು ಪರಿಹರಿಸುವ ವಿಧಿವಿಧಾನಗಳನ್ನು ಸ್ಥಾಪಿಸುವ ಜರೂರು ಕೂಡ ಇದೆ. ಇದರ ಜತೆಗೆ ಕೊಡವ ಸಮುದಾಯ ಮತ್ತು ಇತರ ಸಹ-ಸಾಂಸ್ಕೃತಿಕ ಪಾರಿವಾರಿಕ ಸಮುದಾಯಗಳ ಕುಲಶಾಸ್ತಿçÃಯ ಅಧ್ಯಯನಗಳಿಗೆ ಪೀಠದ ಮೂಲಕ ಆದ್ಯತೆ ಕೊಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ.