ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ 1,34,895 ಎಕರೆಗಳಷ್ಟು ಪ್ರದೇಶದ ಜಮೀನಿನಲ್ಲಿ ಬೇಸಾಯಕ್ಕೆ ಅನುಕೂಲ ಆಗುವಂತೆ ನೀರು ಒದಗಿಸುವ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯವನ್ನು ಮಳೆಗಾಲದಲ್ಲಿ ಭರ್ತಿ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಮುಂಗಾರು ಆರಂಭದ ಸೂಚನೆಗಳು ಸಿಗುತ್ತಿದ್ದತೆಯೇ ಈ ಸಂಬAಧ ನೀರಾವರಿ ಇಲಾಖೆ ಭರದ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದೆ. ಪ್ರಮುಖವಾಗಿ ಗೇಟ್‌ಗಳ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಸದ್ಯ ವಾರ್ಷಿಕ ನಿರ್ವಹಣಾ ಕೆಲಸಗಳನ್ನು ಮಾಡಲಾಗುತ್ತಿದೆ.