ಅರ್ಜಿಯ ಒಂದು ಪ್ರತಿಯನ್ನು ಬಿಎಲ್‌ಒ ಅವರಿಗೆ ಸಲ್ಲಿಸಿ, ಮತ್ತೊಂದು ಪ್ರತಿಗೆ ಅಧಿಕಾರಿಯ ರುಜುವಾತು ಪಡೆದು ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಸೂಚಿಸಿದರು. ಆಯೋಗದಿಂದ ನೀಡಲಾಗುವ ಅರ್ಜಿ ಒಂದೇ ಪ್ರತಿಯಲ್ಲಿ ಲಭ್ಯವಾಗುವ ಕಾರಣ, ಮೊದಲು ಅದರ ಜೆರಾಕ್ಸ್ ಪ್ರತಿಯನ್ನು ಪಡೆದು ಅದರಲ್ಲಿ ಮಾಹಿತಿ ಭರ್ತಿ ಮಾಡಿ ಪರಿಶೀಲಿಸಿದ ನಂತರ ಮೂಲ ಅರ್ಜಿಯಲ್ಲಿ ಯಾವುದೇ ತಪ್ಪುಗಳಿಲ್ಲದಂತೆ ಮಾಹಿತಿ ನಮೂದಿಸುವುದು ಒಳಿತು ಎಂದು ಸಲಹೆ ನೀಡಿದರು.