ನಾಪೋಕ್ಲು: ಜಿಲ್ಲೆಯ ಗಡಿಭಾಗವಾದ ಪೆರಾಜೆ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ಸೋಮವಾರ ರಾತ್ರಿ ದಾಂಧಲೆ ನಡೆಸಿ ಸಲನ್ನು ತಿಂದು ಹಾನಿಮಾಡಿವೆ. .ಪೆರಾಜೆ, ಚೆಂಬು, ಕುಂಡಾಡು ಗ್ರಾಮವ್ಯಾಪ್ತಿಯಲ್ಲಿ ತೋಟಕ್ಕೆ ನುಗ್ಗಿರುವ ಆನೆಗಳು, ತೆಂಗು,ಅಡಿಕೆ,ಬಾಳೆ ಗಿಡಗಳನ್ನು ಧ್ವಂಸ ಮಾಡಿವೆ.ತೋಟಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿರುವ ಆನೆಗಳು ಬೇಲಿಗಳನ್ನೂ ನೆಲಸಮಮಾಡಿವೆ. . ಕಾಡಾನೆಗಳ ಉಪಟಳದಿಂದ ರೈತರು ಬೇಸತ್ತು ಅರಣ್ಯ ಇಲಾಖೆಯವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. .ಕಾಡಾನೆ ಕಾರ್ಯಾಚರಣೆ ತಂಡದ ಸಿಬ್ಬಂದಿ ಮಂಗಳವಾರ ಹಾನಿ ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯ ನಡೆಸಿದರು.