ಕರುಳಿನ ಸಮಸ್ಯೆಯಿಂದ ಆನೆ ಸಾವು

ಸ್ಥಳೀಯರು ಆನೆ ಕಳೇಬರಕ್ಕೆ ಪೂಜೆ ಸಲ್ಲಿಸಲಾಯಿತು.
ಸ್ಥಳೀಯರು ಆನೆ ಕಳೇಬರಕ್ಕೆ ಪೂಜೆ ಸಲ್ಲಿಸಲಾಯಿತು.
Published on
ನಾಪೋಕ್ಲು:

ಕೊಳಕೇರಿ ಗ್ರಾಮದ ಬೊಮ್ಮಂಜಕೇರಿಯ ಅಚ್ಛಾಂಡಿರ ಕಾರ್ಯಪ್ಪ ಅವರ ಗದ್ದೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ಕಾಡಾನೆ ಅಂತ್ಯಕ್ರಿಯೆಯನ್ನು ಮಂಗಳವಾರ ಮಾಡಲಾಯಿತು.


ಮರಣೋತ್ತರ ಪರೀಕ್ಷೆಯಲ್ಲಿ ಕಾಡಾನೆಗೆ ಕರುಳು ಸಮಸ್ಯೆ ಇದ್ದುದು ಕಂಡುಬಂದಿದೆ. 15 -16 ವರ್ಷದ ಗಂಡಾನೆ ಇದಾಗಿದ್ದು, ದಂತವನ್ನು ಭಾಗಮಂಡಲದಲ್ಲಿ ಸಂರಕ್ಷಿಸಲಾಗಿದೆ. ಆನೆಯ ಅಂಗಾಂಗಳನ್ನು ಪರೀಕ್ಷೆಗಾಗಿ ಮೈಸೂರಿನ ಪಶುವೈದ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಫಿರೋಜ್ ಖಾನ್ ವಿಜಯವಾಣಿಗೆ ತಿಳಿಸಿದರು.
ಭಾನುವಾರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡುಬಂದ ಆನೆಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಆದರೆ, ಗದ್ದೆಯಲ್ಲಿ ಸೋಮವಾರ ಕಾಡಾನೆ ಕಳೇಬರ ಪತ್ತೆಯಾಗಿತ್ತು. ಸಂಜೆಯಾದ್ದರಿಂದ ಮರಣೋತ್ತರ ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಯಿತು.
ಪಶುವೈದ್ಯಾಧಿಕಾರಿ ಚಿಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭ ಸ್ಥಳೀಯರು ಆನೆ ಕಳೇಬರಕ್ಕೆ ಪೂಜೆ ಸಲ್ಲಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂತಿಲ್ ಕುಮಾರ್, ವಲಯ ಅರಣ್ಯ ಅಧಿಕಾರಿ ಶಂಕರ್ ಉಪವಲಯ ಅರಣ್ಯಾಧಿಕಾರಿಗಳಾದ ಫಿರೋಜ್ ಖಾನ್, ಕಾಳೇಗೌಡ ಅರಣ್ಯ ರಕ್ಷಕರಾದ ಶರತ್, ಗ್ರಾಮಸ್ಥರಾದ ಪುಲ್ಲೆರ ವಿನುಚಿಟ್ಟಿಯಪ್ಪ, ಭೀಮಯ್ಯ, ಕುಶಾಲಪ್ಪ, ಅರುಣ, ಅಚ್ಛಾಂಡಿರ ಮಧು, ಮಂದಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net