ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಆನೆ ದಾಳಿಗೆ ಯತ್ನ

ಸಿದ್ದಾಪುರ ಸಮೀಪದ ಎಮ್ಮೆ ಗುಂಡಿ ಟಾಟಾ ಎಸ್ಟೇಟ್ ಮುಖ್ಯ ಗೇಟ್ ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಆನೆ ದಾಳಿಗೆ ಯತ್ನಿಸಿರುವುದು.
ಸಿದ್ದಾಪುರ ಸಮೀಪದ ಎಮ್ಮೆ ಗುಂಡಿ ಟಾಟಾ ಎಸ್ಟೇಟ್ ಮುಖ್ಯ ಗೇಟ್ ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಆನೆ ದಾಳಿಗೆ ಯತ್ನಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಘಟನೆ
ಸಿದ್ದಾಪುರ: ಬೆಳೆಗಾರನ ಬಲಿ ಪಡೆದು ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಆನೆ ದಾಳಿಗೆ ಯತ್ನಿಸಿದೆ.
ಶುಕ್ರವಾರ ಸಂಜೆ ಎಮ್ಮೆ ಗುಂಡಿ ಟಾಟಾ ಎಸ್ಟೇಟ್ ಮುಖ್ಯ ಗೇಟ್ ಬಳಿ ಕಾಡಾನೆಯನ್ನು ಹಿಂಬಾಲಿಸುತ್ತಿದ್ದ ವೇಳೆ ಏಕಾಏಕಿ ಹಿಂದಕ್ಕೆ ತಿರುಗಿ ಅರಣ್ಯ ಇಲಾಖೆ ಸಿಬ್ಬಂದಿಯತ್ತ ಓಡಿ ಬಂದು ದಾಳಿಗೆ ಮುಂದಾಗಿದೆ.
ಈ ವೇಳೆ ಸಮಯ ಪ್ರಜ್ಞೆ ಮೆರೆದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಆನೆ ದಾಳಿಯಿಂದ ತಪ್ಪಿಸಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಬಳಿಕ ಶಾರ್ಪ್ ಶೂಟರ್ ಅರವಳಿಕೆ ನೀಡಿ ಕಾಡಾನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net