ಇಲ್ಲಿನ ಮಾವೇಲಿ ಸಹಕಾರ ಸಂಘದ ಚುನಾವಣೆ ಸಂಘ ಪ್ರಾರಂಭವಾದAದಿನಿAದ ಇದೆ ಮೊದಲ ಬಾರಿಗೆ ಆಡಳಿತ ಮಂಡಳಿ ಚುನಾವಣೆ ಭಾನುವಾರ (ನ.30) ನಡೆಯಿತು. ಸಂಘದಲ್ಲಿ ಒಟ್ಟು 266 ಮತದಾರರು ಇದ್ದು, 217 ಸದಸ್ಯರು ಮತದಾನ ಮಾಡುವ ಮೂಲಕ ಶೇ. 81.5 ರಷ್ಟು ಮತದಾನ ದಾಖಲಾಯಿತು. ನಂತರ ನಡೆದ ಮತ ಎಣಿಕೆ ಸಂದರ್ಭ ಸಾಮಾನ್ಯ ಕ್ಷೇತ್ರದಿಂದ ಕೆ.ಜಿ. ಅಶೋಕನ್, ವಿ.ಎಸ್. ಜಿತೇಶ್, ಎಂ.ಜೆ. ಪ್ರಕಾಶ್, ಪಿ. ರವೀಂದ್ರನ್, ಕೆ.ವರದ. ಎಂ.ಎಸ್. ಶಾಂತಿ, ಎ.ಕೆ. ಶೇಖರನ್, ಮಹಿಳಾ ಮೀಸಲು ಕ್ಷೇತ್ರದಿಂದ ಟಿ.ಕೆ. ಅಜಿತ, ಎನ್.ಎ. ಸುಶೀಲಾ, ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಎಂ.ಡಿ. ರಂಜಿತ್ ಕುಮಾರ್ ಆಯ್ಕೆ ಘೋಷಣೆ ಮಾಡಲಾಯಿತು. ಆಯ್ಕೆಯಾದ ಎಲ್ಲಾ ನಿರ್ದೇಶಕರು ಸದ್ಯದಲ್ಲೇ ಸಭೆ ನಡೆಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.