ನಾಪೋಕ್ಲುವಿನಲ್ಲಿ ಸಂಭ್ರಮದಲ್ಲಿ ಈಲ್ ಉಲ್ ಫಿತ್ರ್

ನಾಪೋಕ್ಲು ಪಟ್ಟಣದ ಮೋಹಿಯುದ್ದೀನ್ ಜುಮ ಮಸೀದಿಗಳಲ್ಲಿ ಮುಸಲ್ಮಾನರು ಸಡಗರ-ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಿಸಿದರು.
ನಾಪೋಕ್ಲು ಪಟ್ಟಣದ ಮೋಹಿಯುದ್ದೀನ್ ಜುಮ ಮಸೀದಿಗಳಲ್ಲಿ ಮುಸಲ್ಮಾನರು ಸಡಗರ-ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಿಸಿದರು.
Published on
ನಾಪೋಕ್ಲು: ಇಲ್ಲಿಯ ಪಟ್ಟಣದ ಮೋಹಿಯುದ್ದೀನ್ ಜುಮ ಮಸೀದಿ , ಮದೀನ ಮಸೀದಿ ಸೇರಿದಂತೆ ಸುತ್ತಮುತ್ತಲಿನ ಚೆರಿಯಪರಂಬು, ಹಳೇ ತಾಲೂಕು, ಎಮ್ಮೆಮಾಡು, ಕುಂಜಿಲ, ಕೊಳಕೇರಿ, ಕೊಟ್ಟಮುಡಿಯ ವಿವಿಧ ಮಸೀದಿಗಳಲ್ಲಿ ಮುಸಮ್ಲಾನರು ಸಡಗರ ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಿಸಿದರು.
ಇಲ್ಲಿಯ ಮೋಹಿಯುದ್ದೀನ್ ಜುಮ ಮಸೀದಿಯ ಕಾರ್ಯಕ್ರಮದಲ್ಲಿ ಖತೀಬ್ ಉಬೈದ್ ಸಖಾಫಿ ಅವರು ಈದ್ ಸಂದೇಶ ನೀಡಿ ಶಾಂತಿ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಸಾಮೂಹಿಕ ನಮಾಜ್ ಬಳಿಕ ಎಲ್ಲರೂ ಪರಸ್ಪರ ಶುಭಾಶಯ ಕೋರಿದರು. ನಂತರ ನಿಧನ ಹೊಂದಿದವರಿಗೆ ಖಬರ್ ಸ್ಥಾನದಲ್ಲಿ ಝಿಯಾರತ್ ಮತ್ತು ವಿಶೇಷ ಪ್ರಾರ್ಥನೆ ನಡೆಸಿದರು
.
ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಎಮ್.ಎಚ್.ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ಪಿ.ಎಂ.ಬದ್ರುದ್ದೀನ್, ಪಿ.ಎಂ.ಅರಫತ್, ಕಾರ್ಯದರ್ಶಿ ಪಿ.ಎಂ.ಯೂನಸ್, ಖಜಾಂಚಿ ಅಬ್ದುಲ್ ರೆಹಮಾನ್ ಹಾಜಿ, ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಮಾಜಿ ಪದಾಧಿಕಾರಿಗಳು, ಸದಸ್ಯರು, ಸಮುದಾಯದವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net