ಕುಶಾಲನಗರದಲ್ಲಿ ಈದುಲ್ ಫಿತರ್ ಆಚರಣೆ

ಈದುಲ್ ಫಿತರ್ ಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನೆ ನಂತರ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಈದುಲ್ ಫಿತರ್ ಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನೆ ನಂತರ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
Published on
ಕುಶಾಲನಗರ:
ಮುಸಲ್ಮಾನರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಫಿತರ್ ಹಬ್ಬವನ್ನು ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಶುಕ್ರವಾರ ಆಚರಿಸಲಾಯಿತು.
ನಿರಂತರ 29 ದಿನಗಳ ವ್ರತಾಚರಣೆಯ ನಂತರ ಶಾಫಿ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಆಚರಿಸಿದರು. ಹಬ್ಬದ ದಿನದಂದು ಬೆಳಗ್ಗೆ ವಿಶೇಷವಾದ ಪ್ರಾರ್ಥನೆ ನೆರವೇರಿಸಲಾಯಿತು.
ಶಾಂತಿ, ಸೌಹಾರ್ದತೆ, ಕರುಣೆ, ಸಹನೆ ಬಗ್ಗೆ ಧರ್ಮಗುರುಗಳಾದ ಶಾಫಿ ಫೈಝೆ ಇರ್ಪಾನಿ ಪ್ರಭಾಷಣ ನೀಡಿದರು. ಜತೆಗೆ ಈದುಲ್ ಫಿತರ್ ಪ್ರಾಮುಖ್ಯತೆ ಬಗ್ಗೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ನೀಡಬೇಕಾದ ದಾನದ ಬಗ್ಗೆ ಭೋದನೆ ನೀಡಿದರು. ನಮಾಜ್ ನಂತರ ಪರಸ್ಪರ ಈದ್ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.
ಈ ಸಂದರ್ಭ ಮಾತನಾಡಿದ ಹಿಲಾಲ್ ಮಸೀದಿ ಅಧ್ಯಕ್ಷ ರಫೀಕ್ ಹಸಿದವನ ನೋವನ್ನು ಅರಿಯುವ ಉದ್ದೇಶದಿಂದ ನಾವು ಮೂವತ್ತು ದಿನಗಳ ಕಾಲ ವ್ರತಾಚರಣೆ ಮಾಡುತ್ತೇವೆ. ಇದು ಮುಸ್ಲೀಮರ ಪವಿತ್ರ ಹಬ್ಬಗಳಲ್ಲಿ ಒಂದು ಎಂದರು. ಕಾರ್ಯದರ್ಶಿ ಕರೀಂ ಮಾತನಾಡಿದರು.
ಈ ಸಂದರ್ಭ ಹಿಲಾಲ್ ಮಸೀದಿ ಕಮಿಟಿ ಪ್ರಮುಖರು, ಸದಸ್ಯರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಸದಸ್ಯರು ಇದ್ದರು.
ಕೂಡಿಗೆ, ನಂಜರಾಯಪಟ್ಟಣ, ಹೊಸಕೋಟೆ, ಸುಂಟಿಕೊಪ್ಪ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಈದುಲ್ ಫಿತರ್ ಹಬ್ಬ ಶುಕ್ರವಾರ ಆಚರಿಸಲಾಯಿತು. ಗುರುವಾರ ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆ ಶಾಫಿ ಬಾಂಧವರಿAದ ಶುಕ್ರವಾರ ಹಬ್ಬ ಆಚರಿಸಲಾಯಿತು. ಶನಿವಾರ ಹನಫಿ ಬಾಂಧವರು ಈದುಲ್ ಫಿತರ್ ಹಬ್ಬ ಆಚರಿಸಲಿದ್ದಾರೆ. ಕುಶಾಲನಗರದ ಗಂಧಕೋಟೆಯ ಈದ್ಗಾ ಮೈದಾನದಲ್ಲಿ ಈದುಲ್ ಫಿತರ್ ಹಬ್ಬದ ವಿಶೇಷ ಪ್ರಾರ್ಥನೆ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net