ಕಾರ್ಯಕ್ರಮವನ್ನು ಮಸೀದಿಯ ಧರ್ಮಗುರುಗಳಾದ ನೌಷಾದ್ ಫೌಜಿ ಉದ್ಘಾಟಿಸಿದರು. ಧರ್ಮಗುರು ಶಮೀರ್ ಫೌಜಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಆರ್‌ಟಿಒ ಆಲಿ ಹುಸೇನ್, ಈಚೆಗೆ ನೇಪಾಳದಲ್ಲಿ ನಡೆದ ಕರಾಟೆಯಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಾದ ಅಫೀಜ್ ಮತ್ತು ಯಾಸಿನ್, ಸಮಾಜದ ಮಹಮ್ಮದ್ ಇಸಾನ್, ಕೆ.ಎಂ.ಸುಲೈಮಾನ್, ನಿಯಾಜ್, ಇಬ್ರಾಹಿಂ, ಬೀರಾನ್ ಕುಟ್ಟಿ, ಅನಿಫ್, ಕೆ.ಎಸ್. ಅಬ್ಬಾಸ್, ರಷೀದ್, ಮುನೀರ್, ಮುಸ್ತಾಫ, ನಾಸೀರ್, ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ನಡೆದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.