ಶಿಕ್ಷಣದಿಂದ ಗುರಿ ಸಾಧನೆ, ಸಮಾಜ ಬದಲಾವಣೆ ಸಾಧ್ಯ

ಶನಿವಾರಸಂತೆಯ  ಸರ್ಕಾರಿ ಮಾದರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ.ಜಮೀರ್ ಆಹಮದ್ ಮಾತನಾಡಿದರು. ಮಹಮ್ಮದ್ ಪಾಷ, ಎನ್.ಕೆ.ಅಪ್ಪಸ್ವಾಮಿ, ಎನ್.ಜಿ.ಅರುಣ್, ಎಂ.ಎನ್.ಹರೀಶ್ ಮಾಗಲು, ಉಪನ್ಯಾಸಕ ಬಿ.ಎಂ.ಪೊನ್ನಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೊಡಗು ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಜಮೀರ್ ಆಹಮ್ಮದ್
  • ಸರ್ಕಾರಿ ಮಾದರಿ ಮಾದರಿ ಪ್ರಾಥಮಿಕ ಶಾಲೆ
ಶನಿವಾರಸಂತೆ: ಶಿಕ್ಷಣದಿಂದ ಗುರಿ ಸಾಧನೆ ಮಾಡಬಹುದಾಗಿದ್ದು, ಇದರೊಂದಿಗೆ ಸಮಾಜವನ್ನೂ ಬದಲಾವಣೆಯೂ ಸಾಧ್ಯ ಎಂದು ಚಿಕ್ಕಅಳುವಾರದ ಕೊಡಗು ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಜಮೀರ್ ಆಹಮ್ಮದ್ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಮಾದರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ್ದ 2025-26ನೇ ಸಾಲಿನ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಜ್ಞಾನಾರ್ಜನೆ ಮೂಲಕ ಎಲ್ಲರೂ ಪ್ರಗತಿ ಹೊಂದಬಹುದು. ಆದರೆ ಪ್ರಸ್ತುತ ಹಣ ಸಂಪಾದನೆ ಮಾಡಲು ಮತ್ತು ಒಂದೇ ದಿನದಲ್ಲಿ ಶ್ರೀಮಂತನಾಗಬೇಕೆಕೆಂಬ ಉದ್ದೇಶ ಇಟ್ಟುಕೊಂಡು ಶಿಕ್ಷಣ ಪಡೆಯುತ್ತಿರುವುದು ದುರಂತ ಎಂದರು.
ಇಂದಿನ ವಿದ್ಯಾವಂತ ಯುವ ಸಮೂಹದಲ್ಲಿ ದೇಶ ಪ್ರೇಮ ಇಲ್ಲ. ಈ ನಿಟ್ಟಿನಲ್ಲಿ ವಿದ್ಯಾವಂತರು ರಾಷ್ಟ್ರದ ಬಗ್ಗೆ ಹೆಮ್ಮೆ ಪಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮುಂದಿನ ಪೀಳೆಗೆಗೆ ಸದೃಢ ಸಮಾಜ ನೀಡಲು ಇಂದಿನ ಪೀಳಿಗೆ ಸಮಾಜ ಮತ್ತು ದೇಶದ ಬಗ್ಗೆ ಹೆಮ್ಮೆಪಡುವ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾಸಂಸ್ಥೆ ನಿರ್ದೇಶಕ ಎ.ಎಂ.ಆನಂದ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲಿ ವಿನಯವಂತಿಕೆ, ಸಂಸ್ಕಾರವನ್ನೂ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಶಿಬಿರ ಸಹಕಾರಿ ಎಂದರು.
ಕಾಲೇಜು ಪ್ರಾಂಶುಪಾಲ ಎಸ್.ಎನ್.ಮೋಹನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತುದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಮಾರಂಭದಲ್ಲಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಮಹಮ್ಮದ್ ಪಾಷ, ಗೌ.ಕಾರ್ಯದರ್ಶಿ ಎನ್.ಕೆ.ಅಪ್ಪಸ್ವಾಮಿ, ನಿರ್ದೇಶಕ ಎನ್.ಜಿ.ಅರುಣ್, ಶಿಬಿರಾಧಿಕಾರಿ ಎಂ.ಎನ್.ಹರೀಶ್ ಮಾಗಲು, ಉಪನ್ಯಾಸಕ ಬಿ.ಎಂ.ಪೊನ್ನಪ್ಪ, ಶಾಲಾ ಎಸ್‌ಡಿಎಂಸಿ ಸದಸ್ಯೆ ಪೂಜಾ ಇತರರಿದ್ದರು.
ಪೋಟೋೆ30ಎಸ್‌ಎಸ್1
ಶನಿವಾರಸಂತೆಯ ಸರ್ಕಾರಿ ಮಾದರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ.ಜಮೀರ್ ಆಹಮದ್ ಮಾತನಾಡಿದರು. ಮಹಮ್ಮದ್ ಪಾಷ, ಎನ್.ಕೆ.ಅಪ್ಪಸ್ವಾಮಿ, ಎನ್.ಜಿ.ಅರುಣ್, ಎಂ.ಎನ್.ಹರೀಶ್ ಮಾಗಲು, ಉಪನ್ಯಾಸಕ ಬಿ.ಎಂ.ಪೊನ್ನಪ್ಪ ಇದ್ದರು.
ಎಸ್‌ಎಸ್2
ಶನಿವಾರಸಂತೆಯ ಸರ್ಕಾರಿ ಮಾದರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net