ಹೆಚ್ಚಳವಾಗಿದೆ ಮಾದಕ ವಸ್ತುಗಳ ಬಳಕೆ, ಮಾರಾಟ

ಮಾದಕ ವಸ್ತು ಮಾರಾಟಗಾರರಿಂದ ಕೊಡಗು ಪೊಲೀಸರು ಇತ್ತೀಚೆಗೆ ವಶಪಡಿಸಿಕೊಂಡ ಗಾಂಜಾ
ಮಾದಕ ವಸ್ತು ಮಾರಾಟಗಾರರಿಂದ ಕೊಡಗು ಪೊಲೀಸರು ಇತ್ತೀಚೆಗೆ ವಶಪಡಿಸಿಕೊಂಡ ಗಾಂಜಾ
Published on
ಮಡಿಕೇರಿ:
ಕೊಡಗು ಪುಟ್ಟ ಜಿಲ್ಲೆಯಾದರೂ ಇಲ್ಲಿ ಈಚೆಗೆ ಆತಂಕಕಾರಿ ಪ್ರಮಾಣದಲ್ಲಿ ದೊಡ್ಡ ಮಟ್ಟದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಕಂಡುಬರುತ್ತಿದೆ. ಪೊಲೀಸರು ಇತ್ತೀಚಿನ ದಿನಗಳಲ್ಲಿ ವಶಪಡಿಸಿಕೊಂಡ ಗಾಂಜಾ ಸೇರಿದಂತೆ ಮಾದಕ ವಸ್ತುಗಳು ಒಂದು ವೇಳೆ ಬಳಕೆದಾರರ ಕೈ ಸೇರಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು ಎನ್ನುವುದು ಕೂಡ ಪ್ರಜ್ಞಾವಂತರನ್ನು ಚಿಂತಿಸುವAತೆ ಮಾಡಿದೆ.
ಒಂದು ಕಡೆ ಪ್ರವಾಸಿ ಜಿಲ್ಲೆ ಎನ್ನುವ ಹೆಗ್ಗಳಿಕೆ, ಮತ್ತೊಂದು ಕಡೆ ವಿಶ್ವವಿದ್ಯಾಲಯ, ಎಂಜಿನಿಯರಿAಗ್, ವೈದ್ಯಕೀಯದಂಥ ಉನ್ನತ ಶಿಕ್ಷಣ ಸಂಸ್ಥೆಗಳು. ಹೀಗೆ ಎಲ್ಲಾ ವಲಯದಿಂದಲೂ ಪ್ರಮುಖವಾಗಿ ಹದಿಹರೆಯದವರು, ಯುವ ಪೀಳಿಗೆಯನ್ನು ಗುರಿಯಾಗಿರಿಸಿಕೊಂಡು ಮಾದಕ ವ್ಯಸನ ಜಾಲ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದೆ. ಈ ಹಿಂದಿನ ಎಸ್‌ಪಿ ಕೆ. ರಾಮರಾಜನ್ ನೇತೃತ್ವದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸ್ ಇಲಾಖೆ ಸಾರಿದ್ದ ಸಮರವನ್ನು ಹಾಲಿ ಎಸ್‌ಪಿ ಆರ್.ಎನ್. ಬಿಂದುಮಣಿ ಮಾರ್ಗದರ್ಶನದಲ್ಲೂ ಕೂಡ ಮುಂದುವರಿಸಿಕೊAಡು ಹೋಗುತ್ತಿದ್ದು, ದಂಧೆಕೋರರಲ್ಲಿ ಸ್ಪಲ್ಪ ಮಟ್ಟಿಗೆ ನಡುಕ ಕಾಣಿಸಿಕೊಂಡಿರುವುದAತೂ ಸತ್ಯ.
ಈ ಸಾಮಾಜಿಕ ಪಿಡುಗು ಹತ್ತಿಕ್ಕಬೇಕಾದರೆ ಬರೀ ಪೊಲೀಸ್ ಇಲಾಖೆ ಶ್ರಮವೊಂದೇ ಸಾಲದು. ಸಮಾಜದ ಎಲ್ಲಾ ಸ್ತರದ ಜನರೂ ತಮ್ಮದೇ ಆದ ರೀತಿಯಲ್ಲಿ ಕೈ ಜೋಡಿಸಬೇಕಾದ ಅಗತ್ಯವಿದೆ. ಪೋಷಕರು ತಮ್ಮ ಮಕ್ಕಳ ಮೇಲೆ ಕಾಳಜಿಯುತ ನಿಗಾ ಇಟ್ಟುಕೊಳ್ಳಬೇಕಾಗುತ್ತದೆ. ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾದಕ ವಸ್ತುಗಳಿಗೆ ಸಂಬAಧಿಸಿದ ಚಟುವಟಿಕೆಗಳು ನಡೆದರೆ ಸಾರ್ವಜನಿಕರು ಪೊಲೀಸರ ಗಮನಕ್ಕೆ ತರಬೇಕು. ಹೀಗೆ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಜವಾಬ್ದಾರಿ ಪ್ರದರ್ಶಿಸಿದರೆ ಈ ದಂಧೆಗೆ ಕಡಿವಾಣ ಹಾಕಬಹುದಾಗಿದೆ.
"

ಯುವ ಜನಾಂಗ ಮಾದಕ ವಸ್ತುಗಳ ಸೇವನೆಗೆ ಬಲಿಯಾಗದಂತೆ ಮಾಡುವಲ್ಲಿ ಪೋಷಕರು ಮತ್ತು ಸಮಾಜ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಪೋಷಕರು ಆದಷ್ಟು ತಮ್ಮ ಮಕ್ಕಳ ಕಡೆ ಹೆಚ್ಚಿನ ಗಮನ ನೀಡುತ್ತಿರಬೇಕು. ಸಮಾಜದಲ್ಲಿ ಯಾರಾದರೂ ಮಾದಕ ದ್ರವ್ಯ ಸೇವನೆ ಮಾಡುತ್ತಿರುವುದು ಅಥವಾ ಮಾದಕ ದ್ರವ್ಯಗಳನ್ನು ಮಾರುತ್ತಿರುವುದು ಕಂಡುಬAದಲ್ಲಿ ಪೊಲೀಸರ ಗಮನಕ್ಕೆ ತರಬೇಕು. ಸುತ್ತಮುತ್ತ ಯಾರಾದರೂ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದರೆ ಅವರ ಮನ ಪರಿವರ್ತನೆ ಮಾಡಿ ಮಾದಕ ವಸ್ತುಗಳ ಚಟದಿಂದ ಹೊರಬರುವಂತೆ ಮಾಡಬೇಕು.

"

ಮಾದಕ ವ್ಯಸನ ಬಹುಬೇಗನೇ ಯುವಶಕ್ತಿಯನ್ನು ದುರ್ಬಲಗೊಳಿಸಬಲ್ಲದು. ಆದುದರಿಂದ ಇಂಥ ದುಶ್ಚಟಗಳನ್ನು ತಡೆಯುವುದು ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ, ಪೋಷಕರು, ಸಮಾಜ ಹಾಗೂ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಮಾದಕ ವಸ್ತುಗಳ ಬಗ್ಗೆ ತಮಗೆ ದೊರೆತ ಮಾಹಿತಿಗಳನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳುವುದರ ಮೂಲಕ, ಯಶಸ್ವಿಯಾಗಿ ಇಂತಹ ದುಷ್ಕೃತ್ಯಗಳನ್ನು ತಡೆಗಟ್ಟಬಹುದು. ಯಾವುದೇ ದೇಶದ ಶಕ್ತಿ ನಿಂತಿರುವುದು ಆ ದೇಶದ ಯುವಶಕ್ತಿಯ ಮೇಲೆ, ಆದುದರಿಂದ ದೇಶವನ್ನು ದುರ್ಬಲಗೊಳಿಸಬೇಕೆಂದರೆ ಅಲ್ಲಿನ ಯುವಶಕ್ತಿಯನ್ನು ದುರ್ಬಲಗೊಳಿಸಿದರೆ ಸಾಕು.

"

ಮಾದಕ ವಸ್ತು ಮಾರಾಟ ಮಾಡುವ ಜಾಲವನ್ನು ಕೊಡಗಿನ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಇಂಥ ಸಂದರ್ಭಗಳಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಹಲವು ಕಡೆ ಯುವ ಜನಾಂಗ ಮಾದಕ ವ್ಯಸನಿಯಾಗುತ್ತಿರುವುದು ಕಂಡು ಬರುತ್ತಿದೆ. ಅನುಮಾನ ಬಂದರೆ ಪೋಷಕರು ಸೂಕ್ತ ಚಿಕಿತ್ಸೆ ಕೊಡಿಸಲೇಬೇಕು.

"

ಇತ್ತೀಚಿಗೆ ಕೊಡಗಿನಲ್ಲಿ ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸುವಲ್ಲಿ ಕೊಡಗು ಪೊಲೀಸ್ ಇಲಾಖೆ ಯಶಸ್ವಿಯಾಗುತ್ತಿದೆ. ಆದರೆ ಮಕ್ಕಳ ಪೋಷಕರು ಹಾಗೂ ಜವಾಬ್ದಾರಿಯುತ ಸಾರ್ವಜನಿಕರು ಸಹ ಎಚ್ಚರಿಕೆ ವಹಿಸಬೇಕು. ಎಲ್ಲೇ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಮಾಡುತ್ತಿರುವುದನ್ನು ಕಂಡರೆ ತಕ್ಷಣ ಇಲಾಖೆಗೆ ಮಾಹಿತಿ ನೀಡುವ ಮೂಲಕ ಇನ್ನಷ್ಟು ಸಹಕಾರ ನೀಡಿದರೆ ಜಿಲ್ಲೆ ಮಾದಕ ವಸ್ತು ನಿರ್ಮೂಲನಾ ಜಿಲ್ಲೆ ಆಗಲಿದೆ.

"

ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳನ್ನು ಬಳಸುವ ಮತ್ತು ಮಾರಾಟ ಮಾಡುವ ವ್ಯಕ್ತಿಗಳು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112ಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹದು. ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತ್ತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net