ಫುಟ್‌ಬಾಲ್ ಪಂದ್ಯಕ್ಕೆ ಚಾಲನೆ

ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಬಿಬಿಜಿಎಸ್ ಮೈದಾನದಲ್ಲಿ  ಏಳನೇ ವರ್ಷದ ಮುಕ್ತ  ಫುಟ್ಭಾಲ್ ಪಂದ್ಯಾವಳಿಗೆ  ದಾನಿಗಳಾದ ಚಾಮೇರ ಪವನ್ ದೇವಯ್ಯ ಚಾಲನೆ ನೀಡಿದರು. ಭರತ್‌ಕುಮಾರ್, ಆದರ್ಶ್, ಅಕಾಶ್, ನವೀನ್ ಇದ್ದರು.
ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಬಿಬಿಜಿಎಸ್ ಮೈದಾನದಲ್ಲಿ ಏಳನೇ ವರ್ಷದ ಮುಕ್ತ ಫುಟ್ಭಾಲ್ ಪಂದ್ಯಾವಳಿಗೆ ದಾನಿಗಳಾದ ಚಾಮೇರ ಪವನ್ ದೇವಯ್ಯ ಚಾಲನೆ ನೀಡಿದರು. ಭರತ್‌ಕುಮಾರ್, ಆದರ್ಶ್, ಅಕಾಶ್, ನವೀನ್ ಇದ್ದರು.
Published on
ಸೋಮವಾರಪೇಟೆ: ಹಿಂದು ಗೆಳೆಯರ ಬಳಗ ಗೌಡಳ್ಳಿ-ದೊಡ್ಡಮಳ್ತೆ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಗೌಡಳ್ಳಿ ಬಿಜಿಎಸ್ ಮೈದಾನದಲ್ಲಿ ಆಯೋಜಿಸಿದ್ದ 7ನೇ ವರ್ಷದ ಮುಕ್ತ ಫುಟ್ಭಾಲ್ ಪಂದ್ಯಾವಳಿಗೆ ಪ್ರಾಯೋಜಕರು ಮತ್ತು ದಾನಿಗಳಾದ ಚಾಮೇರ ಪವನ್ ದೇವಯ್ಯ ಗುರುವಾರ ಚಾಲನೆ ನೀಡಿದರು.
ಪ್ರಥಮ ಬಹುಮಾನ 1.50 ಲಕ್ಷ ರೂ.ಗಳನ್ನು ಶಾಸಕ ಡಾ.ಮಂತರ್‌ಗೌಡ, ದ್ವಿತೀಯ ಬಹುಮಾನ ನಗದು 1 ಲಕ್ಷ ರೂ.ಗಳನ್ನು ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ಟ್ರೋಫಿಗಳನ್ನು ದಾನಿಗಳಾದ ಹಿತ್ತಲಗೇರಿ ವಸಂತ್, ಯಶ್ವಂತ್, ಸುಮಂತ್, ಹಿರಿಕರ ಶಶಿಕಲಾ, ರಕ್ಷಿತ್, ಶರಣ್ ನೀಡಿದ್ದಾರೆ.
ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್‌ಕುಮಾರ್, ಬಳಗದ ಅಧ್ಯಕ್ಷ ಕೆ.ಪಿ.ಆದರ್ಶ್, ಉಪಾಧ್ಯಕ್ಷ ಅಕಾಶ್ ಮುನ್ನಾ, ಕಾರ್ಯದರ್ಶಿ ಪ್ರಜ್ವಲ್ ನಂದಿಗುಂದ, ಖಚಾಂಚಿ ನವೀನ್ ಅಜ್ಜಳ್ಳಿ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net