ಡಾ.ಶಿವಕುಮಾರ ಸ್ವಾಮೀಜಿ ವಿಶ್ವ ಶ್ರೇಷ್ಠ ಸಂತ

ಕುಶಾಲನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಜಿಲ್ಲಾಧ್ಯಕ್ಷ ಎಸ್.ನಂದೀಶ್, ಕುಶಾಲನಗರದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸಾಂಬಶಿವಯ್ಯ ಅವರಿಗೆ ಶ್ರೀಗಳ ಭಾವಚಿತ್ರದೊಂದಿಗೆ ಗೌರವಿಸಲಾಯಿತು. ಡಿವೈಎಸ್‌ಪಿ ಚಂದ್ರಶೇಖರ್,  ಕೆ.ಎಸ್.ಮೂರ್ತಿ, ಬಿ.ನಟರಾಜು,  ಕೆ.ಪಿ.ಪರಮೇಶ್ ಇತರರು ಇದ್ದರು.
ಕುಶಾಲನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಜಿಲ್ಲಾಧ್ಯಕ್ಷ ಎಸ್.ನಂದೀಶ್, ಕುಶಾಲನಗರದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸಾಂಬಶಿವಯ್ಯ ಅವರಿಗೆ ಶ್ರೀಗಳ ಭಾವಚಿತ್ರದೊಂದಿಗೆ ಗೌರವಿಸಲಾಯಿತು. ಡಿವೈಎಸ್‌ಪಿ ಚಂದ್ರಶೇಖರ್, ಕೆ.ಎಸ್.ಮೂರ್ತಿ, ಬಿ.ನಟರಾಜು, ಕೆ.ಪಿ.ಪರಮೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್‌ಪಿ ಚಂದ್ರಶೇಖರ್ ಬಣ್ಣನೆ
  • ಶತಮಾನ ಕಂಡ ಕಾಯಕ ಯೋಗಿ ಸ್ಮರಣೆ
ಕುಶಾಲನಗರ: ಈ ಶತಮಾನ ಕಂಡ ಕಾಯಕ ಯೋಗಿ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ವಿಶ್ವಶ್ರೇಷ್ಠ ಸಂತ ಎಂದು ಡಿವೈಎಸ್‌ಪಿ ಚಂದ್ರಶೇಖರ್ ಬಣ್ಣಿಸಿದರು.
ಶ್ರೀ ಸಿದ್ಧಗಂಗಾ ಭಕ್ತ ಮಂಡಳಿ ವತಿಯಿಂದ ಕುಶಾಲನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ ಭಕ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಡವರು, ದೀನರು, ಶೋಷಿತರಿಗೆ ತ್ರಿವಿಧ ದಾಸೋಹ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳಲ್ಲಿ ಆರದ ಹಣತೆಯಾಗಿ ಬೆಳಗುತ್ತಿರುವ ಮಹಾಜ್ಯೋತಿ. ನಡೆದಾಡಿದ ದೇವರು ಭಕ್ತಜನಕ್ಕೆ ಸಾರಿದ ನೀತಿಯ ಸಂದೇಶಗಳನ್ನು ಎಲ್ಲರೂ ಪಾಲಿಸುವ ಮೂಲಕ ಅತ್ಯುತ್ತಮ ಜೀವನ ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.
ಸಿದ್ಧಗಂಗಾ ಭಕ್ತಮಂಡಳಿ ಸಂಚಾಲಕ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, 15 ವರ್ಷಗಳಿಂದಲೂ ಎಲ್ಲ ಜಾತಿ ಹಾಗೂ ಸಮುದಾಯಗಳ ಭಕ್ತಜನರೊಂದಿಗೆ ಕುಶಾಲನಗರದ ವಿವಿಧೆಡೆ ಶ್ರೀಗಳ ಭಕ್ತಿಯ ಸ್ಮರಣೆ ಆಚರಿಸುತ್ತ ಸಮಾಜದ ಸಾಧಕರನ್ನು ಶ್ರೀಗಳ ಹೆಸರಿನಲ್ಲಿ ಗೌರವಿಸಲಾಗುತ್ತಿದೆ ಎಂದರು.
ಡಾ.ಶಿವಕುಮಾರ ಸ್ವಾಮೀಜಿ ಜೀವನ ಸಾಧನೆಗಳ ಕುರಿತು ಮಠದ ವಿದ್ಯಾರ್ಥಿಯೂ ಆದ ಶಿಕ್ಷಕ ಹುಲುಸೆ ಬಸವರಾಜು ಮಾತನಾಡಿದರು.
ಕುಶಾಲನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಜಿಲ್ಲಾಧ್ಯಕ್ಷ ಎಸ್.ನಂದೀಶ್, ಕುಶಾಲನಗರದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸಾಂಬಶಿವಯ್ಯ ಅವರಿಗೆ ಶ್ರೀಗಳ ಭಾವಚಿತ್ರದೊಂದಿಗೆ ಗೌರವಿಸಲಾಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಅಕ್ಕನ ಬಳಗದ ಗೌರವಾಧ್ಯಕ್ಷೆ ವಿಜಯ ಪಾಲಾಕ್ಷ, ಪ್ರಮುಖರಾದ ಸುಶೀಲಾ ಪುಟ್ಟರಾಜು, ವೇದಾವತಿ, ಡಾ.ದೀಪಿಕಾ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್.ನಾಗರಾಜು, ನಿವೃತ್ತ ಕಂದಾಯ ಅಧಿಕಾರಿ ಎಂ.ಬಿ.ಬಸವರಾಜು, ಮಾಜಿ ಯೋಧರಾದ ಹವಾಲ್ದಾರ್ ಜನಾರ್ದನ್, ಜಿ.ಕೆ.ದಿನೇಶ್ ಕುಮಾರ್, ಧಾರ್ಮಿಕ ಸೇವಾ ಮುಖಂಡ ಚಂದ್ರು, ಸೋಮೇಶ್ವರ ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ದೀಕ್ಷಿತ್, ಮಂಜುನಾಥ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net