ಗೋಕಾಕ್ ಚಳವಳಿ ಮೂಲಕ ಕನ್ನಡ ನಾಡಿನಲ್ಲಿ ಹೊಸ ಅಲೆ ಸೃಷ್ಟಿಸಿದ ಡಾ.ರಾಜ್ ಕುಮಾರ್

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿ ಭವನದಲ್ಲಿಡಾ.ರಾಜ್ ಕುಮಾರ್ 97ನೇ ಜನ್ಮ ದಿನ ಆಚರಿಸಲಾಯಿತು. ಕುಮಾರ್, ಅಂಬೆಕಲ್ಲು ಕುಶಾಲಪ್ಪ, ಉ.ರಾ. ನಾಗೇಶ್, ಕಲಾವತಿ, ಲೋಕೇಶ್ ಸಾಗರ್, ಅನಂತಶಯನ ಮತ್ತಿತರರು ಇದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿ ಭವನದಲ್ಲಿಡಾ.ರಾಜ್ ಕುಮಾರ್ 97ನೇ ಜನ್ಮ ದಿನ ಆಚರಿಸಲಾಯಿತು. ಕುಮಾರ್, ಅಂಬೆಕಲ್ಲು ಕುಶಾಲಪ್ಪ, ಉ.ರಾ. ನಾಗೇಶ್, ಕಲಾವತಿ, ಲೋಕೇಶ್ ಸಾಗರ್, ಅನಂತಶಯನ ಮತ್ತಿತರರು ಇದ್ದರು.
Published on
ಮಡಿಕೇರಿ:
ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ.ರಾಜ್ ಕುಮಾರ್ ಕನ್ನಡ ನಾಡು, ನುಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಡಾ.ರಾಜ್ ಕುಮಾರ್ 97ನೇ ಜನ್ಮ ದಿನಾಚರಣೆ ಹಾಗೂ ಡಾ.ರಾಜ್‌ಕುಮಾರ್ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಡಾ.ರಾಜ್ ಕುಮಾರ್ ಗೋಕಾಕ್ ಚಳವಳಿ ಮೂಲಕ ಕನ್ನಡ ನಾಡಿನಲ್ಲಿ ಹೊಸ ಅಲೆ ಸೃಷ್ಟಿಸಿ, ಕನ್ನಡ ನಾಡು, ನುಡಿ, ಭಾಷೆ ಅಭಿವೃದ್ಧಿಗೆ ಶ್ರಮಿಸಿದರು. ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಮೆರೆದಿದ್ದಾರೆ. ನಟ ಸಾರ್ವಭೌಮ ಮತ್ತು ಖ್ಯಾತ ಹಿನ್ನೆಲೆ ಗಾಯಕರಾಗಿ ಚಲನಚಿತ್ರ ರಂಗದಲ್ಲಿ ಬೆಳಕು ಚೆಲ್ಲಿದ್ದಾರೆ ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಶಿಕ್ಷಕ ಉ.ರಾ. ನಾಗೇಶ್ ಡಾ. ರಾಜ್ ಕುಮಾರ್ 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ ಇಂದಿಗೂ ಸಹ ನಾಡಿನ ಜನರಲ್ಲಿ ಕಣ್ಣಿಗೆ ಕಟ್ಟುವಂತೆ ಇದ್ದಾರೆ. ಮನಸ್ಸು ಮತ್ತು ದೇಹ ಗುಡಿಯಾಗಬೇಕು. ಮಾತು ನುಡಿಯಾಗಬೇಕು ಎಂಬAತೆ ಡಾ.ರಾಜ್ ಕುಮಾರ್ ತಮ್ಮ ಜೀವಿತಾವಧಿಯಲ್ಲಿ ನಡೆದುಕೊಂಡಿದ್ದಾರೆ. ಡಾ.ರಾಜ್ ಕುಮಾರ್ ಶರೀರವನ್ನು ಶ್ರಮದ ಕಡೆಗೆ, ಬುದ್ದಿಯನ್ನು ಜ್ಞಾನದ ಕಡೆಗೆ, ಮನಸ್ಸನ್ನು ಶ್ರದ್ಧೆಯ ಕಡೆಗೆ ಎಂಬAತೆ ತಮ್ಮ ಚಲನಚಿತ್ರ ವೃತ್ತಿ ಜೀವನದಲ್ಲಿ ಪಾಲಿಸಿದ್ದಾರೆ. ಬೆಳಕಿಲ್ಲದ ಹಾದಿಯಲ್ಲಿ ಸಾಗಬಹುದು. ಕನಸ್ಸುಗಳಿಲ್ಲದ ಹಾದಿಯಲ್ಲಿ ಸಾಗಲಾಗದು ಎಂದು ಡಾ.ರಾಜ್ ಕುಮಾರ್ ವರ್ಣಿಸಿದ್ದಾರೆ.
ಡಾ.ರಾಜ್ ಕುಮಾರ್ ಕನ್ನಡ ಭಾಷೆಗೆ ಭಾವನೆ ತುಂಬಿದ್ದಾರೆ. ಕಲ್ಪನೆಗೆ ರೆಕ್ಕೆ ನೀಡಿದ್ದಾರೆ. ನಟನೆಗೆ ಜೀವ ತುಂಬಿದ್ದಾರೆ. ಕಲೆಗೆ ರೂಪ ನೀಡಿದ್ದಾರೆ. ಹಾಗೆಯೇ ಇಂಪಾಗಿ, ಕಂಪಾಗಿ, ತಂಪಾಗಿ, ನಯ, ವಿನಯ, ಅಭಿನಯ, ನಾಯಕ, ಶಕ್ತಿ, ಭಕ್ತಿಯಿಂದ ಇಡೀ ಕನ್ನಡ ಚಲನಚಿತ್ರ ರಂಗದಲ್ಲಿ ಛಾಪು ಮೂಡಿಸಿದ್ದಾರೆ. ರಂಗಭೂಮಿಯಿAದ ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ, ಕರ್ನಾಟಕ ರತ್ನ ಪ್ರಶಸ್ತಿ ಪಡೆದು ಸರಳ ವ್ಯಕ್ತಿತ್ವ ಹಾಗೂ ಸಾಂಸ್ಕೃತಿಕ ಐಕಾನ್ ಆಗಿ ಡಾ.ರಾಜ್ ಕುಮಾರ್ ಅವರು ಕನ್ನಡಿಗರ ಹೃದಯಲ್ಲಿ ಜನಾನುರಾಗಿಯಾಗಿದ್ದಾರೆ ಎಂದರು.
ಜಾನಪದ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ ಡಾ.ರಾಜ್ ಕುಮಾರ್ ಅವರ ಸರಳತೆ, ಕನ್ನಡ ಭಾಷೆಯ ಮೇಲಿನ ಪ್ರೀತಿ, ಸಂಸ್ಕೃತಿಯ ಕೊಡುಗೆಯಿಂದ ಡಾ.ರಾಜ್ ಕುಮಾರ್ ಅವರನ್ನು ಅಣ್ಣಾವ್ರು ಎಂದು ಕರೆಯುತ್ತಾರೆ. ಡಾ.ರಾಜ್ ಕುಮಾರ್ ಅವರು ಸಾಮಾಜಿಕ ಕಳಕಳಿಯ ಚಲನಚಿತ್ರಗಳಲ್ಲಿ ನಟಿಸಿ ಇಂದಿಗೂ ಸಹ ಚಲನಚಿತ್ರಗಳನ್ನು ನೋಡುವಂತೆ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೇರು ಪರ್ವತವಾಗಿ ಹೆಸರು ಮಾಡಿದ್ದಾರೆ ಎಂದು ಹೇಳಿದರು.
ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್, ತಹಸೀಲ್ದಾರ್ ಶ್ರೀಧರ್ ಮಾತನಾಡಿದರು.
ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಡಿವೈಎಸ್‌ಪಿ ಸೂರಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಣಜೂರು ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷೆ ಲತಾ ಬಂಗೇರ, ಪ್ರಮುಖರಾದ ಸಂಪತ್ ಕುಮಾರ್, ಅಂಬೆಕಲ್ ನವೀನ್, ಜಯಕುಮಾರ್, ಜಯಲಕ್ಷಿö್ಮ, ಕಿಗ್ಗಾಲು ಗಿರೀಶ್ ಇತರರು ಇದ್ದರು.
ಸಭಾ ಕಾರ್ಯಕ್ರಮದ ನಂತರ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ನೇತೃತ್ವದಲ್ಲಿ, ಡಾ.ರಾಜ್‌ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಪ್ರಯುಕ್ತ ಡಾ.ರಾಜ್ ಕುಮಾರ್ ಗೀತಾ ಗಾಯನ ಕಾರ್ಯಕ್ರಮ ನಡೆಯಿತು. ಲೋಕೇಶ್ ಸಾಗರ್, ಸಂಜಯ್ , ಮಮತಾ, ಸತೀಶ್, ಸುಗಂಧಿ, ಬಸವರಾಜು, ಪುಷ್ಪ ಶಿವರಾಮ್, ಚಂದ್ರಶೇಖರ್, ಸುಪ್ರಿತಾ, ಬಿ.ಜಿ.ಅನಂತಶಯನ, ಕುಮಾರ ಸೇರಿದಂತೆ 28 ಕ್ಕೂ ಹೆಚ್ಚು ಗಾಯಕರು ಡಾ.ರಾಜ್ ಕುಮಾರ್ ಅವರು ಹಾಡಿರುವ ಹಾಡು ಹಾಡಿ ರಾಜ್ ಕುಮಾರ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ಸುಮಾರು 5 ಗಂಟೆಗೂ ಹೆಚ್ಚು ಕಾಲ ಡಾ.ರಾಜ್ ಕುಮಾರ್ ಅವರ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.
ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ಜಾನಪದ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ, ಉ.ರಾ.ನಾಗೇಶ್, ಸಾಹಿತಿ ಕಿಗ್ಗಾಲು ಗಿರೀಶ್, ಮಣಜೂರು ಮಂಜುನಾಥ್, ಜಯಲಕ್ಷಿö್ಮ, ಚಂದ್ರಶೇಖರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net