ಡಾ. ಮಂತರ್ ಗೌಡ ಭೇಟಿಯಾದ ಮಸೀದಿ ಪ್ರಮುಖರು

ಮಡಿಕೇರಿ ಜಾಮಿಯಾ ಮಸೀದಿ ಆಡಳಿತ ಮಂಡಳಿಯ ಪ್ರಮುಖರು ಶಾಸಕ ಡಾ.ಮಂತರ್ ಗೌಡ ಅವರನ್ನು ಭೇಟಿಯಾಗಿ ಮಸೀದಿಗೆ ಸೇರಿದ ಆಸ್ತಿಯ ಕುರಿತು ಚರ್ಚಿಸಿದರು. ನಝೀರ್ ಖುರೇಶಿ, ಹೆಚ್.ಎ. ಹಂಸ, ಎಂ.ಎನ್. ರಾವೋಫ್, ವಿ.ಜಿ. ಮೋಹನ್ ಮತ್ತಿತರರು ಇದ್ದರು.
ಮಡಿಕೇರಿ ಜಾಮಿಯಾ ಮಸೀದಿ ಆಡಳಿತ ಮಂಡಳಿಯ ಪ್ರಮುಖರು ಶಾಸಕ ಡಾ.ಮಂತರ್ ಗೌಡ ಅವರನ್ನು ಭೇಟಿಯಾಗಿ ಮಸೀದಿಗೆ ಸೇರಿದ ಆಸ್ತಿಯ ಕುರಿತು ಚರ್ಚಿಸಿದರು. ನಝೀರ್ ಖುರೇಶಿ, ಹೆಚ್.ಎ. ಹಂಸ, ಎಂ.ಎನ್. ರಾವೋಫ್, ವಿ.ಜಿ. ಮೋಹನ್ ಮತ್ತಿತರರು ಇದ್ದರು.
Published on
ಮಡಿಕೇರಿ:
ಮಡಿಕೇರಿ ಜಾಮಿಯಾ ಮಸೀದಿ ಆಡಳಿತ ಮಂಡಳಿಯ ಪ್ರಮುಖರು ಶಾಸಕ ಡಾ.ಮಂತರ್ ಗೌಡ ಅವರನ್ನು ಸೋಮವಾರ ಭೇಟಿಯಾಗಿ ಮಸೀದಿಗೆ ಸೇರಿದ ಆಸ್ತಿಯ ಕುರಿತು ಚರ್ಚಿಸಿದರು. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಭೇಟಿಯಾದ ಮಸೀದಿಯ ಪ್ರಮುಖರಾದ ನಝೀರ್ ಖುರೇಶಿ, ಬಾಷಾ ಮತ್ತಿತರರು ಜಾಮಿಯಾ ಮಸೀದಿಗೆ ಸೇರಿದ ಆಸ್ತಿ ಒತ್ತುವರಿಯಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರೊಂದಿಗೂ ಚರ್ಚಿಸಿದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಹೆಚ್.ಎ. ಹಂಸ, ಪ್ರಧಾನ ಕಾರ್ಯದರ್ಶಿ ಎಂ.ಎನ್. ರಾವೋಫ್, ಪ್ರಚಾರ ಸಮಿತಿಯ ಅಧ್ಯಕ್ಷ ವಿ.ಜಿ. ಮೋಹನ್, ಪ್ರಮುಖರಾದ ಹರಿಪ್ರಸಾದ್ ಕೋಚನ ಹಾಗೂ ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net