ಡಾ.ಬಿ.ಎನ್.ಪ್ರಸಾದ್‌ಗೆ ರಾಷ್ಟ್ರ ಮಟ್ಟದ ಜೀವಮಾನ ಸಾಧನೆ ಪ್ರಶಸ್ತಿ

ಜನರಲ್ ಡಾ.ಬಿ.ಎನ್ ಪ್ರಸಾದ್ ಅವರಿಗೆ ಥೋರಾಸಿಕ್ ಎಂಡೋಸ್ಕೋಪಿ ಸೊಸೈಟಿ ಆಫ್ ರಾಷ್ಟ್ರಮಟ್ಟದ ಜೀವಮಾನ ಸಾಧನೆ ಪ್ರಶಸಿ ನೀಡಿ ಗೌರವಿಸಲಾಯಿತು.
ಜನರಲ್ ಡಾ.ಬಿ.ಎನ್ ಪ್ರಸಾದ್ ಅವರಿಗೆ ಥೋರಾಸಿಕ್ ಎಂಡೋಸ್ಕೋಪಿ ಸೊಸೈಟಿ ಆಫ್ ರಾಷ್ಟ್ರಮಟ್ಟದ ಜೀವಮಾನ ಸಾಧನೆ ಪ್ರಶಸಿ ನೀಡಿ ಗೌರವಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಥೋರಾಸಿಕ್ ಎಂಡೋಸ್ಕೋಪಿ ಸೊಸೈಟಿ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ಪುರಸ್ಕಾರ
ಸುಂಟಿಕೊಪ್ಪ: ಕೊಡಗಿನವರಾದ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ಬಿ.ಎನ್.ಪ್ರಸಾದ್ ಅವರಿಗೆ ಥೋರಾಸಿಕ್ ಎಂಡೋಸ್ಕೋಪಿ ಸೊಸೈಟಿ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ರಾಷ್ಟ್ರಮಟ್ಟದ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇತ್ತೀಚೆಗೆ ಮುಂಬಯಿಯ ಪಂಚತಾರ ಹೋಟೆಲ್ ಜೆಡಬ್ಲ್ಯು ಮೆರಿಯಟ್‌ನಲ್ಲಿ ಆಯೋಜಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಸಿನಿಮಾ ನಟಿ ಮಲೈಕಾ ಆರೋರ ಪ್ರಶಸ್ತಿ ಪ್ರಧಾನ ಮಾಡಿದರು.
ಲೆಫ್ಟಿನೆಂಟ್ ಜನರಲ್ ಡಾ. ಬಿ.ಎನ್. ಪ್ರಸಾದ್ ಅವರು ಭಾರತದಲ್ಲಿ ಶ್ವಾಸಕೋಶದ ಚಿಕಿತ್ಸೆ ಮತ್ತು ಅದರಲ್ಲಿ ಮಾಡಿರುವ ಸಾಧನೆ 3 ದಶಕಗಳನ್ನು ಮೀರಿದೆ. ಸೇನಾ ಸೇವಾ ಅವಧಿಯಲ್ಲಿ ಅವರು ದೇಶದ ಹಲವು ಸೇನಾ ಆಸ್ಪತ್ರೆಗಳಲ್ಲಿ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣ ಮತ್ತು ಚಿಕಿತ್ಸೆ ಕುರಿತಾದ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳನ್ನು ಜಾರಿಗೆ ತಂದ ಮೊದಲಿಗರಾಗಿದ್ದಾರೆ. ತಮ್ಮ ನಿವೃತ್ತಿಯ ನಂತರ ಶ್ವಾಸಕೋಶದ ಕಾಯಿಲೆಗಳು ಕಾರಣ ರಕ್ಷಣೆ ಚಿಕಿತ್ಸಾ ವಿಧಾನಗಳು ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡ ಅವರು, ಕೊಚ್ಚಿನ್ ಮತ್ತು ಜೋಧ್‌ಪುರದಲ್ಲಿರುವ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಯಲ್ಲಿ ಉತ್ತರಪ್ರದೇಶದ ಲಕ್ನೋದಲ್ಲಿ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ವೈದ್ಯಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ತಮ್ಮ ಜೀವವನ್ನು ಪಣಕ್ಕಿಟ್ಟು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ 1000 ಹಾಸಿಗೆಗಳ ಕೋವಿಡ್ ರಕ್ಷಣಾ ಕೇಂದ್ರದಲ್ಲಿ ಕೆಲಸ ನಿರ್ವಹಿಸಿ ನೂರಾರು ಜನರ ಜೀವರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕೋವಿಡ್ ಕುರಿತಾದ ಪುಸ್ತಕ ಬರೆದಿದ್ದು ತಮ್ಮ ಕೋವಿಡ್ ಕಾಲದ ಸವಾಲು ವಿವರಿಸಿದ್ದಾರೆ. ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ತಜ್ಞ ವೈದ್ಯರ ರಾಷ್ಟ್ರೀಯ ಸಮಾವೇಶಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net