ಕಾರ್ಮಿಕ ಸೇವಾ ಪ್ರತಿನಿಧಿಗಳಿಂದ ಮಾಹಿತಿ ಸಂಗ್ರಹ

ಸಿದ್ದಾಪುರ ಪಟ್ಟಣದಲ್ಲಿ ಫಲಾನುಭವಿಗಳ ಕಾಮಗಾರಿ ಸ್ಥಳಗಳನ್ನು ಪರಿಶೀಲಿಸಿದರು.
ಸಿದ್ದಾಪುರ ಪಟ್ಟಣದಲ್ಲಿ ಫಲಾನುಭವಿಗಳ ಕಾಮಗಾರಿ ಸ್ಥಳಗಳನ್ನು ಪರಿಶೀಲಿಸಿದರು.
Published on
ಸಿದ್ದಾಪುರ: ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಂಚಾರಿ ಸೇವಾ ಕೇಂದ್ರದ ಅಧಿಕಾರಿಗಳು ಸಿದ್ದಾಪುರ ಪಟ್ಟಣದಲ್ಲಿ ನೋಂದಣಿ ಹಾಗೂ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಕಾಮಗಾರಿ ಸ್ಥಳಗಳನ್ನು ಮಂಗಳವಾರ ಪರಿಶೀಲಿಸಿದರು. ಈ ವೇಳೆ ಕಾರ್ಮಿಕರ ಜಿಪಿಎಸ್ ಆಧಾರಿತ ಭಾವಚಿತ್ರಗಳನ್ನು ಸಂಗ್ರಹಿಸಲಾಯಿತು.
ನಕಲಿ ಕಾರ್ಡ್ ಪತ್ತೆ ಹಚ್ಚುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, 43 ಕಾರ್ಮಿಕ ಅಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಈ ಸಂಚಾರಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಅರ್ಜಿದಾರರ ನೈಜತೆಯನ್ನು ದೃಢಪಡಿಸಿ ನಕಲಿ ಕಾರ್ಡ್ ಸೃಷ್ಟಿಗೆ ಕಡಿವಾಣ ಹಾಕಲು ಸಹಾಯವಾಗಲಿದೆ. ಮೇಲ್ವಿಚಾರಕ ಭೂಮಿಕ್ ಹಾಗೂ ಸೇವಾ ಪ್ರತಿನಿಧಿ ಜಿಯೋ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net