ದೊಡ್ಡಮ್ಮ ತಾಯಿ ವಾರ್ಷಿಕ ಪೂಜೋತ್ಸವ

ಸೀಗೆಹೊಸೂರು ಗ್ರಾಮದ ದೊಡ್ಡಮ್ಮತಾಯಿ, ತಮ್ಮಚ್ಚ ಹಾಗೂ ಗುಳಿಗ ದೇವತಾ ಸಮಿತಿ ವತಿಯಿಂದ ದೊಡ್ಡಮ್ಮ ತಾಯಿ ವಾರ್ಷಿಕ ಪೂಜೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಎಲ್. ಧನಂಜಯ, ಪ್ರಮುಖರಾದ ಪ್ರಕಾಶ್, ಅನಂತ, ಸಮಿತಿ ಸದಸ್ಯರು, ಪದಾಧಿಕಾರಿಗಳು ಮತ್ತಿತರರು ಇದ್ದರು.

Published on
ಮಡಿಕೇರಿ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ದೊಡ್ಡಮ್ಮತಾಯಿ, ತಮ್ಮಚ್ಚ ಹಾಗೂ ಗುಳಿಗ ದೇವತಾ ಸಮಿತಿ ವತಿಯಿಂದ ದೊಡ್ಡಮ್ಮ ತಾಯಿ ವಾರ್ಷಿಕ ಪೂಜೋತ್ಸವ ಕಾರ್ಯಕ್ರಮ ಈಚೆಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಗೆ ಕಕ್ಕೆಹೊಳೆ ನದಿಯಿಂದ ಕಳಸ ತಂದು ನಂತರ ದೇವಿಗೆ ಅಭಿಷೇಕ ನೆರವೇರಿದಿ ದೇವರಿಗೆ ಪುಷ್ಪಾಲಂಕಾರ, ಗಣಪತಿ ಹೋಮ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ಪೂರ್ವ ಕೈಂಕರ್ಯಗಳು ಸೋಮವಾರಪೇಟೆಯ ಬಸವಕುಮಾರ ಶಾಸ್ತ್ರಿ ನೇತೃತ್ವದಲ್ಲಿ ನಡೆದವು. ಅಗಮಿಸಿದ್ದ ಭಕ್ತರಿಗೆ ದೊಡ್ಡಮ್ಮ ತಾಯಿ ಬನದಲ್ಲಿ ಅನ್ನಸಂರ್ತಪಣೆ ಕಾರ್ಯ ನಡೆಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಎಲ್. ಧನಂಜಯ, ಕಾರ್ಯದರ್ಶಿ ಪ್ರಕಾಶ್, ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಅನಂತ, ಸಮಿತಿ ಸದಸ್ಯರು, ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net