ಸಂಘದಲ್ಲೇ ವ್ಯವಹಾರ ನಡೆಸಿ ಅಭಿವೃದ್ಧಿಗೆ ಕೈಜೋಡಿಸಿ

 ಸೋಮವಾರಪೇಟೆ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ಸದಸ್ಯರಾದ ಲೀಲಾ ನಿರ್ವಾಣಿ, ಕಲಾ ಸದಾನಂದ್, ರೋಹಿಣಿ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಬೇಬಿ ಚಂದ್ರಹಾಸ್, ಉಮಾ ರುದ್ರಪ್ರಸಾದ್, ಜಲಜಾ ಶೇಖರ್ ಇತರರಿದ್ದರು.
ಸೋಮವಾರಪೇಟೆ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ಸದಸ್ಯರಾದ ಲೀಲಾ ನಿರ್ವಾಣಿ, ಕಲಾ ಸದಾನಂದ್, ರೋಹಿಣಿ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಬೇಬಿ ಚಂದ್ರಹಾಸ್, ಉಮಾ ರುದ್ರಪ್ರಸಾದ್, ಜಲಜಾ ಶೇಖರ್ ಇತರರಿದ್ದರು.
Published on

ಸೋಮವಾರಪೇಟೆ:

ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ 30ನೇ ವಾರ್ಷಿಕ ಮಹಾಸಭೆ ಅಧ್ಯಕ್ಷೆ ಬೇಬಿ ಚಂದ್ರಹಾಸ್ ಅಧ್ಯಕ್ಷತೆಯಲ್ಲಿ ಕೆಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿತ್ತು.

ಅಧ್ಯಕ್ಷೆ ಬೇಬಿ ಚಂದ್ರಹಾಸ್ ಮಾತನಾಡಿ, ಮಹಿಳೆಯರಿಂದಲೇ ಸ್ಥಾಪನೆಯಾದ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘ 30 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸದಸ್ಯರು ಸಂಘದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಂಘದಿಂದ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ ಸಂಘ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ತಿಳಿಸಿದರು.
2025-26ನೇ ಸಾಲಿನಲ್ಲಿ ಸಂಘವು 18.91 ಲಕ್ಷ ರೂ.ನಿವ್ವಳ ಲಾಭ ಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ. ಎಲ್ಲರೂ ಸಂಘದಲ್ಲೇ ವ್ಯವಹಾರ ನಡೆಸಿ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಸದಸ್ಯರಾದ ಲೀಲಾ ನಿರ್ವಾಣಿ, ಕಲಾ ಸದಾನಂದ್ ಹಾಗೂ ರೋಹಿಣಿ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, 26 ವರ್ಷಗಳಿಂದ ಪಿಗ್ಮಿ ಸಂಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಸರಸ್ವತಿ ನಂಜಪ್ಪ ಅವರನ್ನು ಅಭಿನಂದಿಸಲಾಯಿತು.
ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್, ಮಾಜಿ ಅಧ್ಯಕ್ಷೆ ಜಲಜಾ ಶೇಖರ್, ನಿರ್ದೇಶಕರಾದ ಲೋಕೇಶ್ವರಿ ಗೋಪಾಲ್, ಕವಿತಾ ವಿರೂಪಾಕ್ಷ, ವಿದ್ಯಾ ಸೋಮೇಶ್, ವರಲಕ್ಷ್ಮೀ ಸಿದ್ದೇಶ್ವರ್, ಚಂದ್ರಾವತಿ ಶಾಂತಪ್ಪ, ಗೀತಾ ರಾಜು, ಮಂಜುಳಾ, ಜೀತಾಶ್ರೀ ಧುರೀಣ್, ಮೀನಾಕ್ಷಿ, ರಂಜಿತಾ ಲೋಕೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೃಥ್ವಿ ಚಂದ್ರಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net