ಕರಾಟೆಯಲ್ಲಿ ದೈವಿಕ್ ಸಾಧನೆ

ಬಿ.ಎಸ್. ದೈವಿಕ್
ಬಿ.ಎಸ್. ದೈವಿಕ್
Published on

ಪ್ರಮುಖ ಮುಖ್ಯಾಂಶಗಳು

  • 32ನೇ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ
ನಾಪೋಕ್ಲು: ಇಂಟರ್‌ನ್ಯಾಷನಲ್ ಮುಬಿನಿ ಹಾ ಶಿಟೋ-ಆರ್ ವೈಯು ಕರಾಟೆ ಅಸೋಸಿಯೇಷನ್ ಮೈಸೂರಿನಲ್ಲಿ ಆಯೋಜಿಸಿದ್ದ 32ನೇ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸೀಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಬಿ.ಎಸ್. ದೈವಿಕ್ ಬೆಳ್ಳಿ ಮತ್ತು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ. ಸವಿನ್ ಕುಮಾರ್ ಮತ್ತು ವನಿತಾ ದಂಪತಿ ಪುತ್ರನಾಗಿರುವ ದೈವಿಕ್ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ಮತ್ತು ದೀರಜ್ ಕರಿಯಪ್ಪ ಸಹೋದರರಿಂದ ತರಬೇತಿ ಪಡೆಯುತ್ತಿದ್ದಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net