

ಪ್ರಮುಖವಾಗಿ ಕೊಡಗು ವೇಗದ ಸಂಪರ್ಕ ಕೊರತೆ ಎದುರಿಸುತ್ತಿದೆ. ರೈಲ್ವೆ ಮತ್ತು ವಿಮಾನಯಾನ ಸೌಲಭ್ಯದ ಅಗತ್ಯ ಜಿಲ್ಲೆಗೆ ಇದೆ. ಉಡಾನ್ ಯೋಜನೆ ಅಡಿಯಲ್ಲಿ ವಿಮಾನ ನಿಲ್ದಾಣ ಯೋಜನೆ ಜಿಲ್ಲೆಗೆ ಆದಷ್ಟು ಶೀಘ್ರ ಬರಬೇಕಿದೆ. ನವೋದ್ಯಮಗಳ ಬಗ್ಗೆ ಈಗಿನ ತಲೆಮಾರಿಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಜಿಲ್ಲೆಯಲ್ಲಿರುವ ಎಂಜಿನಿಯರಿAಗ್ ಕಾಲೇಜು, ಪಾಲಿಟೆಕ್ನಿಕ್‌ಗಳಲ್ಲಿ ಈ ಸಂಬAಧ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದರೆ ಕೊಡಗಿನಲ್ಲಿ ಇನ್ನೂ ಹೆಚ್ಚಿನ ನವೋದ್ಯಮಗಳ ಆರಂಭವನ್ನು ನಿರೀಕ್ಷೆ ಮಾಡಬಹುದು.
ರಾಜ್ಯದ ಒಟ್ಟು ನವೋದ್ಯಮ ಸಂಸ್ಕೃತಿ ಕೇವಲ ರಾಜಧಾನಿ ಬೆಂಗಳೂರಿಗಷ್ಟೇ ಸೀಮಿತವಾಗಬಾರದು ಎಂಬ ಉನ್ನತ ಉದ್ದೇಶದಿಂದ ಕರ್ನಾಟಕ ಸರ್ಕಾರ ಬಿಯಾಂಡ್ ಬೆಂಗಳೂರು ಮತ್ತು ಲೀಪ್ ಎಂಬ 1 ಸಾವಿರ ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯ ಪ್ರಮುಖ ಗುರಿ ನಾವೀನ್ಯತೆಯನ್ನು ವಿಕೇಂದ್ರೀಕರಿಸುವುದು ಮತ್ತು ದ್ವಿತೀಯ ಹಾಗೂ ತೃತೀಯ ಹಂತದ ಜಿಲ್ಲೆಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿದೆ.