ವಚನಗಳಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆ ಸಂದೇಶ

 ಸೋಮವಾರಪೇಟೆ ಶ್ರೀ ಬಸವೇಶ್ವರ ದೇವಾಲಯದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಸವೇಶ್ವರ, ಶ್ರೀ ಅಕ್ಕಮಹಾದೇವಿ ಜಯಂತಿ ಅಚರಿಸಲಾಯಿತು. ಉಷಾ, ಶಿವಕುಮಾರ್, ಗೀತಾ ಇದ್ದರು.
ಸೋಮವಾರಪೇಟೆ ಶ್ರೀ ಬಸವೇಶ್ವರ ದೇವಾಲಯದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಸವೇಶ್ವರ, ಶ್ರೀ ಅಕ್ಕಮಹಾದೇವಿ ಜಯಂತಿ ಅಚರಿಸಲಾಯಿತು. ಉಷಾ, ಶಿವಕುಮಾರ್, ಗೀತಾ ಇದ್ದರು.
Published on
ಸೋಮವಾರಪೇಟೆ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಸೋಮವಾರಪೇಟೆ ತಾಲೂಕು ಕದಳಿ ವೇದಿಕೆ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಸವೇಶ್ವರ, ಶ್ರೀ ಅಕ್ಕಮಹಾದೇವಿ ಜಯಂತಿಯನ್ನು ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಬುಧವಾರ ಆಚರಿಸಲಾಯಿತು.
ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್ ಮಾತನಾಡಿ, ಬಸವಣ್ಣ ಹಾಗೂ ಶರಣರ ವಚನಗಳು ಸಮಾಜದಲ್ಲಿ ಸಮಾನತೆ ಮತ್ತು ಜಾತಿ ವ್ಯವಸ್ಥೆ ನಿರ್ಮೂಲನೆ ಸಂದೇಶ ಸಾರುತ್ತವೆ. ಬಸವಣ್ಣನವರ ಕಳಬೇಡ, ಕೊಲಬೇಡ ಹಾಗೂ ಅಕ್ಕಮಹಾದೇವಿ ಅವರ ಬೆಟ್ಟದ ಮೇಲೊಂದು ಮನೆಯ ಮಾಡಿ ವಚನಗಳ ಸಾರವನ್ನು ಇಂದಿನ ಜೀವನ ಶೈಲಿಗೆ ಹೋಲಿಕೆ ಮಾಡಿ ವಿವರಿಸಿದರು.
ಶ್ರೀ ಶಿವಕುಮಾರ ಸ್ವಾಮೀಜಿ ಅವರು ಕಾಯಕವೇ ಕೈಲಾಸ ತತ್ವವನ್ನು ಅಳವಡಿಸಿಕೊಂಡ ನಡೆದಾಡುವ ದೇವರು ಎಂದು ಹೆಸಾರದರು. ಪ್ರತಿ ವರ್ಷ ಈ ಮೂವರು ಮಹನೀಯರ ಜಯಂತಿಗಳನ್ನು ಒಟ್ಟಿಗೆ ಆಚರಿಸಲಾಗುವುದು ಎಂದು ಭರವಸೆ ನೀಡಿದರು.
ಸಮಾಜದ ಮುಖಂಡರಾದ ಶಿವಕುಮಾರ್, ಅಕ್ಕನ ಬಳಗದ ಅಧ್ಯಕ್ಷೆ ಗೀತಾ ರಾಜು, ಪ್ರಮುಖರಾದ ಮೃತ್ಯುಂಜಯ, ಯುವರಾಜ್, ಉಮಾ ರುದ್ರಪ್ರಸಾದ್ ಇದ್ದರು. ಸರೋಜಮ್ಮ, ಸುಶೀಲಮ್ಮ, ನಾಗಮಣಿ, ಜಲಜಾ, ಕವಿತಾ, ಮಾಯಾ ಹಾಗೂ ಶೈಲಜಾ ವಚನಗಳನ್ನು ವಾಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net