ಪಂದ್ಯಾವಳಿಯಲ್ಲಿ ಸಬ್ ಜೂನಿಯರ್ ಬಾಲಕ ಹಾಗೂ ಬಾಲಕಿಯರ ೧೬ ವರ್ಷದೊಳಗಿನ ವಿಭಾಗ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ೨೧ ವರ್ಷದೊಳಗಿನ ವಿಭಾಗ, ಪುರುಷರ ಹಾಗೂ ಮಹಿಳೆಯರ ೩೦ ವರ್ಷ ಮೇಲ್ಪಟ್ಟವರ ವಿಭಾಗ ಮತ್ತು ಮಿಶ್ರ ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದೆ. ಆಸಕ್ತರು ಜ.೧೫ ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಹೆಚ್ಚಿನ ಮಾಹಿತಿಗೆ ೯೪೮೩೫೯೮೭೬೧ ಸಂಪರ್ಕಿಸಬಹುದು ಎಂದು ತಿಳಿಸಿದರು.