ಫೆ.20,21,22 ರಂದು ಜಿಲ್ಲಾಮಟ್ಟದ ಹಾಕಿ ಟೂರ್ನಿ

 ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಕ್ಲಬ್ ಅಧ್ಯಕ್ಷ ಎಂ.ಇ. ಮಹೇಶ್
ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಕ್ಲಬ್ ಅಧ್ಯಕ್ಷ ಎಂ.ಇ. ಮಹೇಶ್
Published on

ಪ್ರಮುಖ ಮುಖ್ಯಾಂಶಗಳು

  • ಹಾಕಿ ಕೂರ್ಗ್ ಸಹಭಾಗಿತ್ವ
  • ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯ
  • ಹಾಕಿ ಟೂರ್ನಿ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಎಂ.ಇ. ಮಹೇಶ್
ಸೋಮವಾರಪೇಟೆ: ಹಾಕಿ ಕೂರ್ಗ್ ಸಹಭಾಗಿತ್ವದಲ್ಲಿ ಇಲ್ಲಿನ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಫೆ.20,21,22 ರಂದು ಪಟ್ಟಣ ಜೂನಿಯರ್ ಕಾಲೇಜು ಸಮೀಪದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ಜಿಲ್ಲಾಮಟ್ಟದ ಹಾಕಿ ಟೂರ್ನಿ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಎಂ.ಇ. ಮಹೇಶ್ ತಿಳಿಸಿದರು.
ದಿ.ಬಿ.ಇ.ರಂಗಸ್ವಾಮಿ ಕುರುಹಿನಶೆಟ್ಟಿ ಚೂರಿಗಿಡ್ನ ಅವರ ನೆನಪಿನಲ್ಲಿ ಮಕ್ಕಳಾದ ಬಿ.ಆರ್.ವೇಣು, ಬಿ.ಆರ್.ವಿಜಯ್ ಹಾಗೂ ಬಿ.ಆರ್.ವಿನಯ್ ಟ್ರೋಫಿ ಮತ್ತು ವಿಜೇತರಿಗೆ ನಗದು ಬಹುಮಾನ ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಾಕಿ ಕೂರ್ಗ್ ನೋಂದಾಯಿತ 8 ಬಲಿಷ್ಠ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ವಿಜೇತ ತಂಡಕ್ಕೆ ಮೊದಲ ಬಹುಮಾನ ಒಂದು ಲಕ್ಷ ರೂ. ನಗದು, ದ್ವಿತೀಯ ಐವತ್ತು ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಪ್ರತಿ ತಂಡದಲ್ಲಿ ಐದು ಮಂದಿ ಅತಿಥಿ ಆಟಗಾರರಿಗೆ ಅವಕಾಶ ಇದ್ದು, ಇದರಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಬಹುದು ಎಂದರು.
ಫೆ.20ರಂದು ಬೆಳಗ್ಗೆ 9.30ಕ್ಕೆ ಪಂದ್ಯಾಟಕ್ಕೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭ ಅಂತಾರಾಷ್ಟ್ರೀಯ ಮಾಜಿ ಹಾಕಿ ಆಟಗಾರರಾದ ಬಿ.ಪಿ.ಗೋವಿಂದ, ಅರ್ಜುನ್ ಹಾಲಪ್ಪ, ಎಸ್.ವಿ. ಸುನೀಲ್, ವಿಕ್ರಂಕಾಂತ್, ಭಾರತ ಹಾಕಿ ತಂಡದ ತರಬೇತುದಾರ ಜನಾರ್ದನ್ ಸೇರಿದಂತೆ ಹಲವರು ಉದ್ಘಾಟನೆ ದಿನದಂದು ಭಾಗವಹಿಸಲಿದ್ದಾರೆ ಎಂದರು.
ಹಾಕಿಗೂ ಸೋಮವಾರಪೇಟೆಗೂ ಅವಿನಾಭಾವ ಸಂಬಂಧವಿದೆ. ಪಟ್ಟಣದ ಹಾಕಿ ಮೈದಾನದಲ್ಲಿ ಆಟ ಕಲಿತ ಅನೇಕರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟವಾಡಿದ್ದಾರೆ. ಸೋಮವಾರಪೇಟೆಯಲ್ಲಿ ಅನೇಕ ವರ್ಷಗಳ ಕಾಲ ನಿರಂತರ ಹಾಕಿ ಪಂದ್ಯಾಟಗಳು ನಡೆದಿವೆ. ಕರೋನಾ ವೈರಸ್ ಸಂಕಷ್ಟದ ವರ್ಷಗಳಲ್ಲಿ ಪಂದ್ಯಾಟಗಳನ್ನು ನಡೆಸಲು ಸಾಧ್ಯವಾಗಿರಲ್ಲಿಲ್ಲ. ಇದೀಗ ಮುಂದುವರಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಖಜಾಂಚಿ ಕೆ.ಜೆ. ಗಿರೀಶ್, ಗೌರವ ಅಧ್ಯಕ್ಷ ಎಚ್.ಎನ್. ಅಶೋಕ್, ಸಹ ಕಾರ್ಯದರ್ಶಿ ಬಿ.ಆರ್. ಮಹೇಶ್, ಸಲಹೆಗಾರರಾದ ಕೆ.ಎಸ್. ಪ್ರಕಾಶ್ ಹಾಗೂ ನಿರ್ದೇಶಕ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net