ಇಂದು ಜಿಲ್ಲಾ ಮಟ್ಟದ ಫುಟ್ಬಾಲ್, ಥ್ರೋಬಾಲ್ ಪಂದ್ಯಾಟ

ಸೋಮವಾರಪೇಟೆ ತಾಲೂಕಿನ ಗೌಡಳ್ಳಿಯಲ್ಲಿ ನಡೆಯುವ ಮುಕ್ತ ಪುಟ್ಭಾಲ್ ಮತ್ತು ಮಹಿಳೆಯರ ವಿಭಾಗದ  ಥ್ರೋಬಾಲ್ ಪಂದ್ಯಾಟದ ಟ್ರೋಫಿಗಳನ್ನು ಆಯೋಜಕರು ಅನಾವರಣಗೊಳಿಸಿದರು. ಮೊಗಪ್ಪ, ಗುರುಪ್ರಸಾದ್, ಸುಮಂತ್, ವೆಂಕಟೇಶ್ ಇದ್ದರು.
ಸೋಮವಾರಪೇಟೆ ತಾಲೂಕಿನ ಗೌಡಳ್ಳಿಯಲ್ಲಿ ನಡೆಯುವ ಮುಕ್ತ ಪುಟ್ಭಾಲ್ ಮತ್ತು ಮಹಿಳೆಯರ ವಿಭಾಗದ ಥ್ರೋಬಾಲ್ ಪಂದ್ಯಾಟದ ಟ್ರೋಫಿಗಳನ್ನು ಆಯೋಜಕರು ಅನಾವರಣಗೊಳಿಸಿದರು. ಮೊಗಪ್ಪ, ಗುರುಪ್ರಸಾದ್, ಸುಮಂತ್, ವೆಂಕಟೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ವಧರ್ಮ ಕ್ಷೇತ್ರ ಗೌಡಳ್ಳಿಯ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ
  • ಶಿವರಾತ್ರಿ ಹಾಗೂ ಜಾತ್ರೋತ್ಸವ
  • ಮುಕ್ತ ಜಿಲ್ಲಾ ಮಟ್ಟದ ಫುಟ್ಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ
ಸೋಮವಾರಪೇಟೆ: ಸರ್ವಧರ್ಮ ಕ್ಷೇತ್ರ ಗೌಡಳ್ಳಿಯ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ವತಿಯಿಂದ ಶಿವರಾತ್ರಿ ಹಾಗೂ ಜಾತ್ರೋತ್ಸವ ಅಂಗವಾಗಿ ಮುಕ್ತ ಜಿಲ್ಲಾ ಮಟ್ಟದ ಫುಟ್ಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಫೆ. 14 ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ತಿಳಿಸಿದ್ದಾರೆ.
ಮೊದಲು ನೋಂದಾಯಿಸಿಕೊಂಡ 16 ತಂಡಗಳಿಗೆ ಮಾತ್ರ ಅವಕಾಶ ಇದ್ದು, ಫುಟ್ಬಾಲ್ ವಿಜೇತರಿಗೆ ಮೊದಲ ಬಹುಮಾನವಾಗಿ 1,11,111 ರೂ., ದ್ವಿತೀಯ ಬಹುಮಾನವಾಗಿ 55,555 ರೂ. ಹಾಗೂ ಟ್ರೋಫಿ ನೀಡಲಾಗುತ್ತದೆ. ಮಹಿಳೆಯರಿಗೆ ನಡೆಯುವ ಥ್ರೋಬಾಲ್ ಪಂದ್ಯದ ವಿಜೇತರಿಗೆ 22,222 ರೂ. ಹಾಗೂ ದ್ವಿತೀಯ ರೂ. 11,111 ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಮೊದಲ 10 ತಂಡಗಳಿಗೆ ಪಾಲ್ಗೊಳ್ಳಲು ಅವಕಾಶ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.14ರಂದು ಮುಕ್ತ ಗುಡ್ಡಗಾಡು ಓಟದ ಸ್ಪರ್ಧೆ ಬೆಳಿಗ್ಗೆ 8ಕ್ಕೆ ಪ್ರಾರಂಭಗೊಳ್ಳಲಿದೆ. ಕ್ರೀಡಾಕೂಟದ ಟ್ರೋಫಿಗಳನ್ನು ಅಧ್ಯಕ್ಷ ಬಿ.ಪಿ.ಮೊಗಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಉಪಾಧ್ಯಕ್ಷ ಸುಮಂತ್ ಕೂಗೂರು, ಕಾರ್ಯದರ್ಶಿ ಸಿ.ಇ. ವೆಂಕಟೇಶ್ ಹಾಗೂ ಖಜಾಂಚಿ ಜಿ.ಎ. ಯೋಗೇಶ್ ಗುರುವಾರ ಅನಾವರಣಗೊಳಿಸಿದರು.
13ರಂದು ಬೆಳಿಗ್ಗೆ ಜಾತ್ರೆಯನ್ನು ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಚ್.ಮಂಜುನಾಥ್ ಉದ್ಘಾಟಿಲಿದ್ದು, 10 ಗಂಟೆಗೆ ಜಾತ್ರಾ ಆವರಣದಲ್ಲಿ ಪಶುಚಿಕಿತ್ಸಾ ಶಿಬಿರ ನಡೆಯಲಿದೆ. 10.30ಕ್ಕೆ ಮುಕ್ತ ಫುಟ್ಭಾಲ್ ಪಂದ್ಯಾಟವನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಲಿದ್ದಾರೆ. 14 ರಂದು 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರೈತ ಹೋರಾಟಗಾರ ಜಿ.ಎಂ.ಹೂವಯ್ಯ, ದೇವಾಲಯ ಸಮಿತಿ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಜಾವಲಿನ್ ಥ್ರೋ ಕ್ರೀಡಾಪಟು ಡಿ.ಆರ್.ಅನೀಶ್ ಅವರನ್ನು ಸನ್ಮಾನಿಸಲಾಗುತ್ತದೆ.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಸಿಮೆಂಟ್ ಮಂಜು, ಹರೀಶ್‌ಗೌಡ, ಮಾಜಿ ಸಚಿವ ಬಿ.ಎ.ಜೀವಿಜಯ, ಎಂ.ಪಿ.ಅಪ್ಪಚ್ಚು ರಂಜನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ದೊಡ್ಡಮಳ್ತೆ ಗ್ರಾಪಂ ಅಧ್ಯಕ್ಷ ಡಿ.ಎಂ.ಗೋಪಾಲಕೃಷ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ಭಾಗವಹಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net