ದಫ್ ಕಲಾ ಒಕ್ಕೂಟ ಕೊಡಗು ಇದರ ಅಧ್ಯಕ್ಷ ಮಜೀದ್ ಚೋಕಂಡಳ್ಳಿ ಮಾತನಾಡಿ, ಜಿಲ್ಲೆಯಾದ್ಯಂತ ಇರುವ ಎಲ್ಲ ಮದರಸಗಳಿಗೆ ಹಾಗೂ ದಫ್ ಕಲಾ ತಂಡಗಳಿಗೆ ಈ ಸ್ಪರ್ಧೆಗೆ ಸ್ವಾಗತ ಬಯಸುತ್ತೇನೆ. ಒಕ್ಕೂಟದ ವತಿಯಿಂದ ಆಯೋಜಿಸುತ್ತಿರುವ ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯು ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಜುಬೇದ್ ತೋಟಿಕಲ್ ಅವರ ಕಥಾ ಪ್ರಸಂಗ ಜರುಗಲಿದೆ. ಕಾರ್ಯಕ್ರಮದಲ್ಲಿ ಪಂಡಿತರು , ಸಾಮಾಜಿಕ ಮತ್ತು ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದರು.]