ರಾಜಸೀಟು ಉದ್ಯಾನವನ ಬಳಿಯ ಟಿಕೇಟ್ ಕೌಂಟರ್, ಮಾಹಿತಿ ಕೇಂದ್ರ ಹಾಗೂ ಉದ್ಯಾನವನದೊಳಗೆ ಸಿಸಿಟಿವಿ ಹಾಗೂ ಗೇಟ್ ಅನ್ನು ಪರಿಶೀಲಿಸಿದರು. ಉದ್ಯಾನವನ ಸುತ್ತಲೂ ಸಿಸಿಟಿವಿ ವೈರ್ ಹಾಗೂ ವಿದ್ಯುತ್ ತಂತಿಗಳಿಂದ ಕೂಡಿದ್ದು, ಉದ್ಯಾನವನದ ಸೌಂದರ್ಯ ಹಾಳಾಗಿದೆ. ಆದ್ದರಿಂದ ಕೂಡಲೇ ಎಲ್ಲಾ ದುರಸ್ತಿ ಕಾರ್ಯ ಹಾಗೂ ಭೂಮಿಯ ಒಳಭಾಗದಲ್ಲಿ ತಂತಿ ಅಳವಡಿಸುವುದು ಹಾಗೂ ದೀಪಗಳನ್ನು ದುರಸ್ತಿಪಡಿಸಿ ಅಲಂಕಾರಿಕಾ ದೀಪಗಳನ್ನು ಅಳವಡಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.