ಪ್ರವಾಸೋದ್ಯಮ ಅಕ್ರಮಕ್ಕೆ ಜಿಲ್ಲಾಡಳಿತ ಅಂಕುಶ

ಪ್ರವಾಸೋದ್ಯಮವನ್ನು ನಿಯಮಬದ್ಧವಾಗಿ ನಡೆಸುವಂತೆ ಸೂಚಿಸುವ ಸಲುವಾಗಿ ಡಿವೈಎಸ್‌ಪಿ ಪಿ.ಎ. ಸೂರಜ್ ಅಧ್ಯಕ್ಷತೆಯಲ್ಲಿ ಪೊಲೀಸ್ ಇಲಾಖೆಯಿಂದ ಸಭೆ ನಡೆಯಿತು. ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್, ಅಂಬೆಕಲ್ ನವೀನ್ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.
ಪ್ರವಾಸೋದ್ಯಮವನ್ನು ನಿಯಮಬದ್ಧವಾಗಿ ನಡೆಸುವಂತೆ ಸೂಚಿಸುವ ಸಲುವಾಗಿ ಡಿವೈಎಸ್‌ಪಿ ಪಿ.ಎ. ಸೂರಜ್ ಅಧ್ಯಕ್ಷತೆಯಲ್ಲಿ ಪೊಲೀಸ್ ಇಲಾಖೆಯಿಂದ ಸಭೆ ನಡೆಯಿತು. ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್, ಅಂಬೆಕಲ್ ನವೀನ್ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.
Published on
ಮಡಿಕೇರಿ:
ಪ್ರವಾಸೋದ್ಯಮದ ಹೆಸರಿನಲ್ಲಿ ಕೊಡಗಿನಲ್ಲಿ ಈಚೆಗೆ ನಡೆಯುತ್ತಿರುವ ಕೆಲವು ಅಹಿತರ ಘಟನೆಗಳು ಜಿಲ್ಲೆಯ ಪಾಲಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಇದರಿಂದಾಗಿ ನಿಯಮಬದ್ಧವಾಗಿ ಈ ಉದ್ಯಮದಲ್ಲಿ ತೊಡಗಿಸಿಕೊಂಡವರೂ ಕಸಿವಿಸಿ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸರ್ಕಾರದ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂಬAಧಿಸಿದವರ ಸಭೆಗಳನ್ನು ಕರೆದು ಅಗತ್ಯ ಮಾಹಿತಿ ನೀಡುವ ಕೆಲಸವೂ ನಡೆದಿದೆ.
ಭಾರತದ ಸ್ಕಾಟ್‌ಲ್ಯಾಂಡ್, ದಕ್ಷಿಣದ ಕಾಶ್ಮೀರ ಎಂದೆಲ್ಲಾ ಹೆಸರಾಗಿರುವ ಪಶ್ಚಿಮಘಟ್ಟದ ಮಲೆನಾಡಿನ ಮಡಿಲಲ್ಲಿರುವ ಪುಟ್ಟ ಕೊಡಗು ತನ್ನ ಅತ್ಯದ್ಭುತ ಪ್ರಾಕೃತಿಕ ಸೌಂದರ್ಯದಿAದಲಾಗಿ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕರಾವಳಿ ಪ್ರವಾಸೋದ್ಯಮ ಉತ್ತುಂಗದಲ್ಲಿದ್ದ ಸಮಯದಲ್ಲಿ 2004ರಲ್ಲಿ ದೇಶದ ಕರಾವಳಿಗೆ ಸುನಾಮಿ ಅಪ್ಪಳಿಸಿದ ನಂತರ ಪ್ರವಾಸಿಗರ ಆದ್ಯತೆಯ ಕ್ಷೇತ್ರ ಬದಲಾಯಿತು. ಪಶ್ಚಿಮಘಟ್ಟದ ಗಿರಿ ಶ್ರೇಣಿಗಳ ಕಡೆಗೆ ಪ್ರವಾಸಿಗರು ಭೇಟಿ ನೀಡಲಾರಂಭಿಸಿದರು. ಹಾಗಾಗಿ ಕಳೆದ 2 ದಶಕಗಳಿಂದ ಈಚೆಗೆ ಕೊಡಗಿನಲ್ಲಿ ವಾಣಿಜ್ಯಿಕವಾಗಿ ಶುರುವಾದ ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯದ ಮೂಲವಾಗಿ ಬೆಳೆದು ನಿಂತಿದೆ.
ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಪ್ರವಾಸೋದ್ಯಮದ ಬೆಳವಣಿಗೆಯೂ ಅಡ್ಡಾದಿಡ್ಡಿಯಾಗಿ ನಡೆಯುತ್ತಿದೆ. ಇದಕ್ಕೊಂದು ಶಿಸ್ತುಬದ್ಧ ವ್ಯವಸ್ಥೆ ಇಲ್ಲದ ಕಾರಣ ಹಲವಷ್ಟು ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗಿದೆ. ಹೋಂಸ್ಟೇಗಳನ್ನು ನೋಂದಾಯಿಸಿಕೊAಡೇ ಕಾಯಾಚರಣೆ ನಡೆಸಬೇಕು ಎನ್ನುವ ನಿಯಮ ಇದ್ದರೂ ಬಹುತೇಕ ಹೋಂಸ್ಟೇಗಳು ಅನಧಿಕೃತವಾಗಿಯೇ ನಡೆಯುತ್ತಿವೆ. ಇದರ ಜತೆಗೆ ಪ್ರವಾಸೋದ್ಯಮದ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳಿಗೂ ಕೊಡಗು ಸಾಕ್ಷಿ ಆಗಿದೆ.
ಕೊಡಗಿಗೆ ಪ್ರವಾಸ ಬರುವ ಪ್ರವಾಸಿಗರಿಗೆ ಇಲ್ಲಿ ಪ್ರಯಾಸ ಆಗಬಾರದು. ವಾಪಸ್ ತೆರಳುವಾಗ ಒಂದಿಷ್ಟು ಸಿಹಿನೆನಪುಗಳನ್ನು ತೆಗೆದುಕೊಂಡು ಹೋಗಿ ಇತರರಿಗೂ ಹಂಚಬೇಕು. ಅವರೂ ಜಿಲ್ಲೆಯ ಪ್ರಾಕೃತಿಕ ಸೌಂದರ್ಯ ಅನುಭವಿಸುವಂತಾಗಬೇಕು ಎನ್ನುವುದು ನಿಯಮಬದ್ಧವಾಗಿ ಪ್ರವಾಸೋದ್ಯಮ ನಡೆಸುತ್ತಿರುವವರ ಮನದಿಂಗಿತವಾಗಿದೆ. ಆದರೆ ಇಲ್ಲೂ ನುಸುಳಿಕೊಂಡಿರುವ ಕೆಲವರ ಕೃತ್ಯಗಳು ಕೊಡಗಿನ ಪ್ರವಾಸೋದ್ಯದ ಬಗ್ಗೆ ನಕರಾತ್ಮಕ ಸುದ್ದಿಗಳು ಹರಡುವಂತೆ ಆಗಿದೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದೆ.
ಪ್ರವಾಸೋದ್ಯಮಕ್ಕೆ ಸಂಬAಧಿಸಿದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರ ಸಭೆಗಳನ್ನು ನಡೆಸಿ ಸರ್ಕಾರದ ನಿಯಮಗಳು, ಇದನ್ನು ಉಲ್ಲಂಘಿಸಿದರೆ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡುವುದಲ್ಲದೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿಯಮಬದ್ಧವಾಗಿ ನಡೆಸುವಂತೆ ಖಡಕ್ ಸೂಚನೆಗಳನ್ನೂ ರವಾನಿಸಲಾಗುತ್ತಿದೆ. ಈಚೆಗೆ ಜಿಲ್ಲೆಯಲ್ಲಿ ನಡೆಸಿರುವ ಬಹಳಷ್ಟು ಘಟನೆಗಳಿಗೆ ನಿಯಮಗಳ ಉಲ್ಲಂಘನೆಯೇ ಕಾರಣವಾಗಿದ್ದು ಸಂಬAಧಿಸಿದರವರು ಕಾನೂನಿನ ಅಡಿಯಲ್ಲಿ ಎದುರಿಸುತ್ತಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಹೋಂ-ಸ್ಟೇ ನಡೆಸುವ ಮಾಲೀಕರು ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳಬೇಕು. ಸರ್ಕಾರದ ಪ್ರವಾಸೋದ್ಯಮ ನೀತಿ ಹಾಗೂ ಮಾರ್ಗಸೂಚಿಗಳಿಗೆ ಬದ್ಧರಿದ್ದು, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ನಿರಾಕ್ಷೇಪಣಾ ಪತ್ರಗಳನ್ನು ಪಡೆದುಕೊಂಡಿರಬೇಕು. ನೋಂದಣಿ ಮಾಡಿಕೊಳ್ಳುವ ಮಾಲೀಕರಿಗೆ ಪ್ರವಾಸೋದ್ಯಮ ಇಲಾಖೆಯಿಂದ 5 ವರ್ಷದ ಅವಧಿಗೆ ಪರವಾನಿಗೆ ನೀಡಲಾಗುತ್ತದೆ.
ಹೋಂ-ಸ್ಟೇಗಳಲ್ಲಿ ಗ್ಯಾಸ್ ಗೀಸರ್ ಬಳಸುವಂತಿಲ್ಲ ಎಂದು ಈಗಾಗಲೇ ತಿಳಿಸಿದ್ದರೂ ಹಲವು ಹೋಂ-ಸ್ಟೇಗಳಲ್ಲಿ ಗ್ಯಾಸ್ ಗೀಸರ್ ಬಳಕೆಯಲ್ಲಿದೆ. ಈಚೆಗೆ ಸೋಮವಾರಪೇಟೆಯ ಹೋಂಸ್ಟೇ ಒಂದರಲ್ಲಿ ಗ್ಯಾಸ್ ಗೀಸರ್ ದುರಂತದಿAದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಗ್ಯಾಸ್ ಗೀಸರ್ ಬಳಕೆಯಿಂದ ಇಂಥ ಅನಾಹುತಗಳು ಸಂಭವಿಸಿದಲ್ಲಿ ಹೋಂ-ಸ್ಟೇ ಮಾಲೀಕರೇ ನೇರ ಹೊಣೆಗಾರರಾಗಿರುತ್ತಾರೆ. ಪ್ರವಾಸೋದ್ಯಮ ಇಲಾಖೆ ನೀಡುವ ಮಾರ್ಗಸೂಚಿ ಪಾಲಿಸುವುದರೊಂದಿಗೆ ಪ್ರವಾಸಿಗರಿಗೆ ಕೊಡಗು ಜಿಲ್ಲೆಯ ಪ್ರವಾಸವನ್ನು ಸ್ಮರಣೀಯವಾಗಿರುವಂತೆ ಪ್ರವಾಸೋದ್ಯಮ ಇಲಾಖೆ ಮೂಲಕ ಸೂಚಿಸಲಾಗಿದೆ.
ಹೋಂಸ್ಟೇ ಮಾಲೀಕರು ಸರ್ಕಾರದ ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಪೊಲೀಸ್ ಇಲಾಖೆ ಮೂಲಕವೂ ತಿಳಿಸಲಾಗಿದೆ. ಹೋಂಸ್ಟೇ ಮಾಲೀಕರು ತಮ್ಮ ಕಾರ್ಮಿಕರ ಮಾಹಿತಿಯನ್ನು ಕಡ್ಡಾಯವಾಗಿ ಪಡೆದು ಸಂಬAಧಿಸಿದ ಇಲಾಖೆಗೆ ಕಳುಹಿಸಿಕೊಡಬೇಕು. ಸಂಬAಧಿಸಿದ ಇಲಾಖೆಗಳಿಂದ ಕಾಲ ಕಾಲಕ್ಕೆ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು. ಮುಖ್ಯವಾಗಿ ಪ್ರವಾಸಿಗರ ಸಾವಿಗೆ ಕಾರಣವಾಗುತ್ತಿರುವ ಗ್ಯಾಸ್ ಗೀಸರ್‌ಗಳನ್ನು ಬಳಸಬಾರದು. ಬಳಸಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಎಚ್ಚರಿಕೆ ನೀಡಲಾಗಿದೆ.
ಮಡಿಕೇರಿ ಸಮೀಪದ ಮಾಂದಲಪಟ್ಟಿ ಪ್ರವಾಸಿತಾಣ ಈಗ ಪ್ರವಾಸಿಗರಿಗೆ ಮುಕ್ತವಾಗಿದೆ. ಹಾಗಾಗಿ ಇಲ್ಲಿಗೆ ತೆರಳಲು ಖಾಸಗಿ ವಾಹನಗಳಿಗೆ ಮುಕ್ತ ಅವಕಾ± ಕೊಡಲಾಗಿದೆ. ಇದರಿಂದಾಗಿ ಇಲ್ಲಿಯ ಜೀಪ್‌ನವರು ಪ್ರವಾಸಿಗರ ವಾಹನಗಳನ್ನು ತಡೆದು ತಮ್ಮ ಜೀಪಿನಲ್ಲೇ ತೆರಳಬೇಕೆಂದು ಬಲವಂತ ಮಾಡುವಂತಿಲ್ಲ. ಮಾಂದಲಪಟ್ಟಿ ಜೀಪ್‌ಗಳು ಎಲ್ಲಿ ಜೀಪ್ ಸ್ಟ್ಯಾಂಡ್ ಇದೆಯೋ ಅಲ್ಲಿಂದಲೇ ಬಾಡಿಗೆಗೆ ಹೋಗಬೇಕು. ಎಲ್ಲರೂ ಸೌಹಾರ್ದದಿಂದ ನಡೆದುಕೊಳ್ಳಬೇಕು, ಪ್ರವಾಸಿಗರೊಂದಿಗೆ ಉತ್ತಮವಾದ ನಡತೆ ಹೊಂದಿರಬೇಕು. ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳಬಾರದು. ಜೀಪ್ ಮಾಲೀಕರು, ಚಾಲಕರು ಸಹ ಜೀಪ್ ನಿಲ್ದಾಣದಲ್ಲಿ ಸರತಿಯಲ್ಲೇ ಸಾಗಬೇಕು. ನಿಯಮಗಳಡಿಯಲ್ಲೇ ಎಲ್ಲರೂ ಕಾರ್ಯನಿರ್ವಹಿಸಬೇಕು ಎನ್ನುವ ಸೂಚನೆಗಳನ್ನು ಕೊಡಲಾಗಿದೆ.
ಕೊಡಗು ಸೇರಿದಂತೆ ಎಲ್ಲಿಯೇ ಪ್ರವಾಸಿಗರಿಗೆ ಸಮಸ್ಯೆಯಾದರೆ ನ್ಯಾಷನಲ್ ಟೂರಿಸ್ಟ್ ಹೆಲ್ಪ್ ಲೈನ್ ನಂಬರ್ 1800 111363ಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದಾಗಿದೆ. ಹಾಗಾಗಿ ರೆಸಾರ್ಟ್, ಹೋಂಸ್ಟೇ, ಪ್ರಮುಖ ಪ್ರವಾಸಿತಾಣಗಳಲ್ಲಿ ಈ ಸಹಾಯವಾಣಿ ಸಂಖ್ಯೆ ಜತೆಗೆ ಇತರ ಎಲ್ಲಾ ಸಹಾಯವಾಣಿ ಸಂಖ್ಯೆಗಳನ್ನು ಪ್ರವಾಸಿಗರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಸಂಬAಧಿಸಿದವರಿಗೆ ಪೊಲೀಸ್ ಇಲಾಖೆ ಮೂಲಕ ಸೂಚನೆ ಕೊಡಲಾಗಿದೆ.
"

ಹೋಂ-ಸ್ಟೇ ನಡೆಸುವ ಮಾಲೀಕರು ಪ್ರವಾಸಿಗರ ಮನೋರಂಜನೆಗಾಗಿ ಹೋಂ-ಸ್ಟೇಗಳಲ್ಲಿ ಈಜುಕೊಳ, ಜಿಪ್‌ಲೈನ್, ಕಾಯಾಕಿಂಗ್ ಮತ್ತು ಇತರೆ ಸಾಹಸ ಚಟುವಟಿಕೆ ಅಳವಡಿಸಿಕೊಂಡಿದ್ದಾರೆ. ಈ ಚಟುವಟಿಕೆಗಳನ್ನು ನಡೆಸುವ ಸಂಬAಧ ಸರಿಯಾದ ಮಾರ್ಗಸೂಚಿ ಅನುಸರಿಸಬೇಕು. ಸಂಬAಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆಯಬೇಕು. ಹೋಂ-ಸ್ಟೇಗಳಲ್ಲಿ ಗ್ಯಾಸ್ ಗೀಸರ್ ಬಳಸುವಂತಿಲ.್ಲ ಇವುಗಳಿಂದ ಪ್ರವಾಸಿಗರಿಗೆ ತೊಂದರೆಗಳು ಉಂಟಾದಲ್ಲಿ ಮಾಲೀಕರೇ ನೇರ ಹೊಣೆಗಾರರಾಗಿರುತ್ತಾರೆ.

— ಶಶಿಧರ್, ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಕೊಡಗು
"

ಪ್ರವಾಸಿಗರ ಭದ್ರತೆ ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಹೋಂಸ್ಟೇ ಮಾಲೀಕರು ಜವಾಬ್ದಾರಿಯಿಂದ ನಿಯಮಗಳನ್ನು ಪಾಲಿಸಬೇಕು. 3 ತಿಂಗಳ ಸಿಸಿಟಿವಿ ಫೂಟೇಜ್‌ಗಳನ್ನು ಕಡ್ಡಾಯವಾಗಿ ಭದ್ರವಾಗಿಡಬೇಕು. ಹೋಂಸ್ಟೇ ಮಾಲೀಕರು ಸರ್ಕಾರದ ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು. ಹೋಂಸ್ಟೇ ಮಾಲೀಕರು ಕಾರ್ಮಿಕರ ಮಾಹಿತಿಯನ್ನು ಕಡ್ಡಾಯವಾಗಿ ಪಡೆದು ಸಂಬAಧಿಸಿದ ಇಲಾಖೆಗೆ ಕಳುಹಿಸಿಕೊಡಬೇಕು.

— ಪಿ.ಎ. ಸೂರಜ್, ಡಿವೈಎಸ್‌ಪಿ, ಮಡಿಕೇರಿ

"

ಆರಂಭದಲ್ಲಿ ಹೋಂಸ್ಟೇ ಪರವಾನಗಿ ಪಡೆದು ನಂತರ ಹೆಚ್ಚುವರಿ ಕೊಠಡಿಗಳನ್ನು ಸೇರಿಸಿಕೊಳ್ಳುವ ಮೂಲಕ ಕೆಲವರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಬಿ ಟು ಬಿ ನಿಯಮವಿದ್ದು ಅದರಂತೆ ವಾಣಿಜ್ಯೀಕರಣ ಮಾಡಿಕೊಂಡು ಬಾಡಿಗೆ ಅಥವಾ ಲೀಜ್ ಆಧಾರದ ಮೇಲೆ ಬೆಡ್ ಅಂಡ್ ಬ್ರೇಕ್‌ಫಾಸ್ಟ್ ನಡೆಸಲಿ. ಹೋಂಸ್ಟೇ ಹೆಸರಿನಲ್ಲಿ ಬಾಡಿಗೆ ಪಡೆದು ವ್ಯವಹರಿಸುವುದರಿಂದ ಮುಂದೆ ಸಮಸ್ಯೆಯಾಗಬಹುದು.

— ಮೋಂತಿ ಗಣೇಶ್, ಅಧ್ಯಕ್ಷೆ, ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net