2026-27 ನೇ ಸಾಲಿನ ಮುಂಗಾರು ಹಂಗಾಮಿನ ಏ. 2026 ರಿಂದ ಸೆ. 2026 ತಿಂಗಳುಗಳಿಗೆ ಯೂರಿಯಾ, ಡಿ.ಎ.ಪಿ, ಎಂ.ಓ.ಪಿ, ಎನ್.ಪಿ.ಕೆ. ಕಾಂಪ್ಲೆಕ್ಸ್ ಹಾಗೂ ಎಸ್.ಎಸ್.ಪಿ. ರಸಗೊಬ್ಬರಗಳನ್ನು ಒಳಗೊಂಡAತೆ ಕೊಡಗು ಜಿಲ್ಲೆಯಲ್ಲಿ ಒಟ್ಟು 98,604 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇರುತ್ತದೆ. ಇದಕ್ಕೆ ಸಂಬAಧಿಸಿದAತೆ ಜಿಲ್ಲೆಯ ಖಾಸಗಿ ಹಾಗೂ ಸಹಕಾರ ಸಂಘಗಳ ಮಾರಾಟ ಮಳಿಗೆಗಳಲ್ಲಿ ಏ.1 ರ ಮಾಹಿತಿಯಂತೆ 40,430 ಮೆಟ್ರಿಕ್ ಟನ್ ನಷ್ಟು ಆರಂಭಿಕ ಶಿಲ್ಕು ದಾಸ್ತಾನು ಇದ್ದು, ಮೇ ತಿಂಗಳ ಕೊನೆಗೆ ವಿವಿಧ ರಸಗೊಬ್ಬರ ಸರಬರಾಜು ಸಂಸ್ಥೆಗಳಿAದ ಜಿಲ್ಲೆಗೆ ಒಟ್ಟು 25,456.9 ಮೆಟ್ರಿಕ್ ಟನ್ ನಷ್ಟು ರಸಗೊಬ್ಬರ ಸರಬರಾಜಾಗಿರುತ್ತದೆ. ಇದರಲ್ಲಿ 41,406.6 ಮೆಟ್ರಿಕ್ ಟನ್ ನಷ್ಟು ಉಳಿಕೆ ದಾಸ್ತಾನಿದ್ದು, 25,172 ಮೆಟ್ರಿಕ್ ಟನ್ ರಸಗೊಬ್ಬರ ಜಿಲ್ಲೆಯ ರೈತರಿಗೆ ಪಿಒಎಸ್ ಮೂಲಕ ಮಾರಾಟವಾಗಿ ವಿತರಣೆಯಾಗಿರುತ್ತದೆ.