ವಿದ್ಯಾರ್ಥಿಗಳಿಗೆ ಸ್ವೆಟರ್, ಕೊಡೆ ವಿತರಣೆ

ಬಲ್ಯಮಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ವೆಟರ್ ಹಾಗೂ ಕೊಡೆಗಳನ್ನು ವಿತರಿಸಲಾಯಿತು. ಆಶಿಕ್ ಚಂಗಪ್ಪ, ಮೇಕೆರಿರ ಮೋಹನ್, ಎಂ.ಎಸ್.ಸಚ್ಚಿನ್ ಬೆಳ್ಳಿಯಪ್ಪ ಇತರರಿದ್ದರು.
ಬಲ್ಯಮಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ವೆಟರ್ ಹಾಗೂ ಕೊಡೆಗಳನ್ನು ವಿತರಿಸಲಾಯಿತು. ಆಶಿಕ್ ಚಂಗಪ್ಪ, ಮೇಕೆರಿರ ಮೋಹನ್, ಎಂ.ಎಸ್.ಸಚ್ಚಿನ್ ಬೆಳ್ಳಿಯಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಸ್ವೆಟರ್, ಕೊಡೆ ವಿತರಣೆ
ಪೊನ್ನಂಪೇಟೆ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಗೋಣಿಕೊಪ್ಪ ಘಟಕದ ವತಿಯಿಂದ ಬಲ್ಯಮಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ವೆಟರ್ ಹಾಗೂ ಕೊಡೆಗಳನ್ನು ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಆಶಿಕ್ ಚಂಗಪ್ಪ ಮಾತನಾಡಿ, ಮರ-ಗಿಡಗಳ ಸಂರಕ್ಷಣೆಯ ಅಗತ್ಯತೆ ಹಾಗೂ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ಉತ್ತಮ ಶಿಕ್ಷಣದ ಮೂಲಕ ಉತ್ತಮ ಪ್ರಜೆಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮೇಕೆರಿರ ಮೋಹನ್, ಖಜಾಂಚಿ ಎಂ.ಎಸ್.ಸಚ್ಚಿನ್ ಬೆಳ್ಳಿಯಪ್ಪ, ಉಪಾಧ್ಯಕ್ಷ ಚೇತನ್, ಸಂಸ್ಥಾಪಕ ಅಧ್ಯಕ್ಷ ಸಂಜೀವ್ ನಾಯರ್, ನಿಕಟ ಪೂರ್ವ ಅಧ್ಯಕ್ಷ ದಿಲ್ ಕುಮಾರ್, ಮನ್ನಕ್ಕಮನೆ ಬಾಲು, ನಿರ್ದೇಶಕರಾದ ಅಂಟೋನಿ.ಟಿ.ಜೆ ಹಾಗೂ ವಿ.ವಿ.ಜಿತೇಂದ್ರ,ಶಾಲೆಯ ಮುಖ್ಯ ಶಿಕ್ಷಕಿ ಕೆ.ಪಿ.ಪವಿತ್ರ, ಸಹ ಶಿಕ್ಷಕರಾದ ತಿರುನೆಲ್ಲಿಮಾಡ ಜೀವನ್, ಸುನೋಜಮ್ಮ, ಸೌಮ್ಯ ಹಾಗೂ ಆಶಾ ಕಾರ್ಯಕರ್ತೆ ಕಾಂಚನ ಪ್ರೇಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net