ಕಾಫಿ ಸಹಕಾರ ಸಂಘದ ಬಲವರ್ಧನೆಗೆ ಚರ್ಚೆ

ಸೋಮವಾರಪೇಟೆಯಲ್ಲಿ ಆಯೋಜಿಸಿದ್ದ ದಿ ಮೈಸೂರು ಕಾಫಿ ಸಂಸ್ಕರಣಾ, ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆಯಲ್ಲಿ  ಅಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿದರು. ಪ್ರಭುದೇವ, ಬೋಸ್ ಮಂದಣ್ಣ ಇದ್ದರು.
ಸೋಮವಾರಪೇಟೆಯಲ್ಲಿ ಆಯೋಜಿಸಿದ್ದ ದಿ ಮೈಸೂರು ಕಾಫಿ ಸಂಸ್ಕರಣಾ, ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆಯಲ್ಲಿ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿದರು. ಪ್ರಭುದೇವ, ಬೋಸ್ ಮಂದಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಟುವಟಿಕೆಗಳ ವಿಸ್ತರಣೆಗೆ ವಿಚಾರಸಂಕಿರಣ
ಸೋಮವಾರಪೇಟೆ: ದಿ ಮೈಸೂರು ಕಾಫಿ ಸಂಸ್ಕರಣಾ, ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆಯನ್ನು ಸಂಘದ ಅಧ್ಯಕ್ಷರೂ ಆದ ಶಾಸಕ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆಯಲ್ಲಿ ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಸಂಘ ಪುನಶ್ಚೇತನಗೊಂಡಿರುವ ಹಿನ್ನೆಲೆ, ಮುಂದಿನ ದಿನಗಳಲ್ಲಿ ಕಾಫಿ ಹಾಗೂ ಇತರ ಪ್ಲಾಂಟೇಷನ್ ಬೆಳೆ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ಸಂಘದ ಪಾತ್ರವನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಲಾಯಿತು. ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ವಿಚಾರಸಂಕಿರಣ ಆಯೋಜಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಸಂಘ ಮತ್ತಷ್ಟು ಲಾಭದಾಯಕವಾಗಿ ಮುಂದುವರಿಯಲು ಅಗತ್ಯವಾದ ಕಾರ್ಯತಂತ್ರಗಳು ಮತ್ತು ಯೋಜನೆಗಳನ್ನು ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಂಘದ ಉಪಾಧ್ಯಕ್ಷ ಪ್ರಭುದೇವ, ಎನ್. ಬೋಸ್ ಮಂದಣ್ಣ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ಕೆ.ಎ.ಯಾಕೂಬ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net