ಮಡಿಕೇರಿ ಕೊಡವ ಸಮಾಜಕ್ಕೆ ಕೊಡವ ಹೆರಿಟೇಜ್ ಕೇಂದ್ರ ನೀಡುವ ಬಗ್ಗೆ ಚರ್ಚೆ

ಮಡಿಕೇರಿ ಕೊಡವ ಸಮಾಜದ ವತಿಯಿಂದ ಶಾಸಕ ಡಾ. ಮಂತರ್ ಗೌಡ ಅವರಿಗೆ ಒಡಿಕತ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಮಂಡುವAಡ ಮುತ್ತಪ್ಪ, ಶಾಂತೆಯAಡ ವೀಣಾ ಅಚ್ಚಯ್ಯ, ನಂದಿನೆರವAಡ ದಿನೇಶ್, ಪುತ್ತರಿರ ಕರುಣ್ ಕಾಳಯ್ಯ ಮತ್ತಿತರರು ಇದ್ದರು.
ಮಡಿಕೇರಿ ಕೊಡವ ಸಮಾಜದ ವತಿಯಿಂದ ಶಾಸಕ ಡಾ. ಮಂತರ್ ಗೌಡ ಅವರಿಗೆ ಒಡಿಕತ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಮಂಡುವAಡ ಮುತ್ತಪ್ಪ, ಶಾಂತೆಯAಡ ವೀಣಾ ಅಚ್ಚಯ್ಯ, ನಂದಿನೆರವAಡ ದಿನೇಶ್, ಪುತ್ತರಿರ ಕರುಣ್ ಕಾಳಯ್ಯ ಮತ್ತಿತರರು ಇದ್ದರು.
Published on
ಮಡಿಕೇರಿ:
ಮಡಿಕೇರಿಯಲ್ಲಿ ಇರುವ ಕೊಡವ ಹೆರಿಟೇಜ್ ಕೇಂದ್ರವನ್ನು ಮಡಿಕೇರಿ ಕೊಡವ ಸಮಾಜಕ್ಕೆ ನೀಡುವ ಕುರಿತು ಮಡಿಕೇರಿ ಶಾಸಕ ಡಾ. ಮಂತರ್ ಗೌಡÀ ನೇತೃತ್ವದಲ್ಲಿ ಶುಕ್ರವಾರ ಚರ್ಚೆ ನಡೆಸಲಾಯಿತು. ಮಡಿಕೇರಿ ಸುದರ್ಶನ್ ಅತಿಥಿಗೃಹದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಾಸಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಡಾ. ಮಂತರ್ ಗೌಡ, ಮಡಿಕೇರಿ ಕೊಡವ ಸಮಾಜ ಉತ್ತಮ ರೀತಿಯಲ್ಲಿ ಸಂಸ್ಥೆಯನ್ನು ನಿರ್ವಹಿಸುವ ವಿಶ್ವಾಸವಿದ್ದು, ಕೊಡವ ಹೆರಿಟೇಜ್ ಕೇಂದ್ರದ ಜವಾಬ್ದಾರಿಯನ್ನು ಕೊಡವ ಸಮಾಜಕ್ಕೆ ನೀಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಹಾಜರಿದ್ದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರಿಗೆ ಈ ಸಂಬAಧ ಮಾರ್ಗದರ್ಶನ ನೀಡಿದರು.
ಶಾಸಕ ಡಾ. ಮಂತರ್ ಗೌಡ ಆಡಳಿತಕ್ಕೆ ಮೂರು ವರ್ಷ ಪೂರೈಸಿದ ಹಿನ್ನೆಲೆ ಹಾಗೂ ಕೊಡವ ಸಮಾಜಕ್ಕೆ ಸಂಪೂರ್ಣ ಸಹಕಾರ ನೀಡಿದ ಕಾರಣಕ್ಕೆ ಮಡಿಕೇರಿ ಕೊಡವ ಸಮಾಜದ ವತಿಯಿಂದ ಒಡಿಕತ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ಮಾಜಿ ಎಂಎಲ್‌ಸಿ ಶಾಂತೆಯAಡ ವೀಣಾ ಅಚ್ಚಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್, ನಿರ್ದೇಶಕರಾದ ನಂದಿನೆರವAಡ ರವಿ ಬಸಪ್ಪ, ಮೂವೆರ ಜಯರಾಂ, ಶಾಂತೆಯAಡ ವಿಶಾಲ್ ಕಾರ್ಯಪ್ಪ, ಪುತ್ತರಿರ ಕರುಣ್ ಕಾಳಯ್ಯ, ಮಂಡಿರ ಸದಾಮುದ್ದಪ್ಪ, ಕನ್ನಂಡ ಕವಿತಾ ಬೊಳ್ಳಪ್ಪ, ಪೆಮ್ಮುಡಿಯಂಡ ಉತ್ತಪ್ಪ, ಪುಲ್ಲೇರ ವಸಂತ, ಪಾಲೆಯಂಡ ರೂಪಾ, ಕೂಪದಿರ ಜೂನ ವಿಜಯ್,ಶಾಂತೆಯAಡ ಶ್ವೇತಾ ಕಾರ್ಯಪ್ಪ ಈ ಸಂದರ್ಭ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net