ರೋಟರಿ ಮಿಸ್ಟಿಹಿಲ್ಸ್ಗೆ ಡೈಮಂಡ್ ಪ್ಲಸ್ ಪ್ರಶಸ್ತಿ

ಅತ್ಯುತ್ತಮ ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯ ಪ್ರಮುಖರು ರೋಟರಿ ಜಿಲ್ಲಾ ಮಟ್ಟದ ಡೈಮಂಡ್ ಪ್ಲಸ್ ಪ್ರಶಸ್ತಿ ಸ್ವೀಕರಿಸಿದರು. ಪಿ.ಕೆ. ರಾಮಕೃಷ್ಣ, ರತ್ನಾಕರ್ ರೈ, ಬಿ.ಕೆ. ಕಾರ್ಯಪ್ಪ, ಸತೀಶ್ ಬೋಳಾರ್, ಯಶಸ್ವಿನಿ ಸೋಮಶೇಖರ್ ಮತ್ತಿತರರು ಇದ್ದರು.

Published on
ಮಡಿಕೇರಿ:
ಅತ್ಯುತ್ತಮ ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ ರೋಟರಿ ಜಿಲ್ಲಾ ಮಟ್ಟದ ಡೈಮಂಡ್ ಪ್ಲಸ್ ಪ್ರಶಸ್ತಿಪಡೆದುಕೊಂಡಿದೆ. ಮೈಸೂರಿನ ಮೈಸೂರು ಯೂನಿಯನ್ ಸಭಾಂಗಣದಲ್ಲಿ ಈಚೆಗೆ ನಡೆದ ರೋಟರಿ ಜಿಲ್ಲೆ 3181 ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿಯ ವಿವಿಧ ಜಿಲ್ಲಾ ಯೋಜನೆಗಳ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಮಡಿಕೇರಿಯ ಮಿಸ್ಟಿ ಹಿಲ್ಸ್ ಸಂಸ್ಥೆಗೆ ಡೈಮಂಡ್ ಪ್ಲಸ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ರೋಟರಿ ಜಿಲ್ಲಾ ಪ್ರಾಂತಪಾಲ ಪಿ.ಕೆ. ರಾಮಕೃಷ್ಣ ಅವರಿಂದ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ಪ್ರಶಸ್ತಿ ಸ್ವೀಕರಿಸಿದರು. ರೋಟರಿಯ ಮುಂದಿನ ಸಾಲಿನ ಪ್ರಾಂತಪಾಲ ಸತೀಶ್ ಬೋಳಾರ್, ನಿಯೋಜಿತ ಪ್ರಾಂತಪಾಲ ಯಶಸ್ವಿನಿ ಸೋಮಶೇಖರ್, ಪ್ರಶಸ್ತಿ ಸಮಿತಿ ಪ್ರಮುಖರಾದ ವಿಕ್ರಂದತ್ತ, ಅರವಿಂದ್ ಭಟ್, ರಿತೇಶ್ ಬಾಳಿಗ, ಉಮೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net