ಕುಶಾಲನಗರ: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರಿನಲ್ಲಿ ಶ್ರೀ ಬಸವೇಶ್ವರ ಮತ್ತು ಆಂಜನೇಯ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ಹನುಮದ್ ವ್ರತ ಹಾಗೂ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಉತ್ಸವ ಅಂಗವಾಗಿ ದೇವಾಲಯ ಸಮಿತಿ ಹಾಗೂ ಮಹಿಳೆಯರಿಂದ ಗಂಗಾ ಪೂಜೆ ನೆರವೇರಿತು. ನಂತರ ದೇವಸ್ಥಾನದಲ್ಲಿ ಮಹಾಮಂಗಳಾರತಿ ನೆರವೇರಿದ ಬಳಿಕ ಅನ್ನದಾನ ನಡೆಯಿತು.
ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಆಶೀರ್ವಚನ ನೀಡಿದರು. ಉತ್ಸವದಲ್ಲಿ ರಾಜಕೀಯ ಮುಖಂಡ ನಟೇಶ್‌ಗೌಡ, ಉದ್ಯಮಿ ರಂಜನ್, ದೇವಸ್ಥಾನ ಸಮಿತಿ ಅಧ್ಯಕ್ಷ ಮಹದೇವ, ಉಪಾಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಪ್ರತಾಪ್‌ರೆಡ್ಡಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.