

ಪ್ರಮುಖ ಮುಖ್ಯಾಂಶಗಳು
ಪರಿಸರವನ್ನು ನಾಶ ಮಾಡಿ ತೋಟ ಮಾಡಿದರೆ ಅದು ಅಭಿವೃದ್ಧಿ ಆಗುವುದಿಲ್ಲ. ನಮ್ಮ ಕೆಲಸಗಳು ಯಾವಾಗಲೂ ಪರಿಸರಕ್ಕೆ ಪೂರಕವಾಗಿಯೇ ಇರಬೇಕು. ಈ ನಿಟ್ಟಿನಲ್ಲಿ ಹುಡುಕಾಟದಲ್ಲಿದ್ದಾಗ ಆಕಸ್ಮಿಕವಾಗಿ ಸಿಕ್ಕಿದ್ದೇ ಈ ವಿಶೇಷ ಕರಿಮೆಣಸು. ತಲೆತಲಾಂತರಗಳಿAದ ನಮ್ಮ ವ್ಯಾಪ್ತಿಯ ಕಾಡುಗಳಲ್ಲಿ ಈ ಪ್ರಭೇದದ ಕಾಳುಮೆಣಸು ಇದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಇದನ್ನೀಗ ವಾಣಿಜ್ಯಿಕವಾಗಿ ಬೆಳೆಸುವ ಸಲುವಾಗಿ ಅಭಿವೃದ್ಧಿಪಡಿಸಲಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆ ಇದೆ.