ಪ್ರತ್ಯೇಕ ರಾಷ್ಟçವನ್ನು ಕೇಳುವುದು ಅವಾಸ್ತವಿಕ, ರಾಜ್ಯ ಕೇಳುವುದು ಜಟಿಲ ವಿಚಾರ ಹಾಗಾಗಿ ಎನ್.ಯು. ನಾಚಪ್ಪ ನೇತೃತ್ವದ ಸಿಎನ್‌ಸಿ ಸಂಘಟನೆ ಕೇಳುತ್ತಿರುವ ಕೊಡವಲ್ಯಾಂಡ್ ತೀರ ವಾಸ್ತವಿಕ ಮತ್ತು ಕಾರ್ಯಸಾಧನೆಯಾಗಲಿರುವ ಅಂಶವಾಗಿದೆ. ಪ್ರತ್ಯೇಕ ಭಾಷೆ, ಪ್ರತ್ಯೇಕ ಭೂ ಪ್ರದೇಶ, ಯೋಧ ಪರಂಪರೆ, ಪಾರಂಪರಿಕ ಭೂಮಿ, ಉನ್ನತ ಮಾನವ ಸಂಪನ್ಮೂಲ, ಬಸಿದರೂ, ಭಗೆದರೂ ಮುಗಿಯದಷ್ಟು ನೈಸರ್ಗಿಕ ಸಂಪನ್ಮೂಲ ಹೊಂದಿರುವ ಏಕ ಜನಾಂಗೀಯ ಆದಿಮಸಂಜಾತ ಆ್ಯನಿಮಿಸ್ಟಿಕ್ ನಂಬಿಗೆಯ ಕೊಡವರು ಕೊಡವಲ್ಯಾಂಡ್ ಮೂಲಕ ಸಂವಿಧಾನಾತ್ಮಕ ಸ್ಥಿರಿಕರ್ಣಕ್ಕಾಗಿ ಸಿಎನ್‌ಸಿಯೊಂದಿಗೆ ಗುರುತಿಸಿಕೊಳ್ಳುವುದು ಅತ್ಯಂತ ಸಮರ್ಥನೀಯ. ಸಿಎನ್‌ಸಿ ಮಂಡಿಸಿರುವ ಎಸ್‌ಟಿ ವರ್ಗೀಕರಣ, ವಿಶ್ವ ರಾಷ್ಟç ಸಂಸ್ಥೆಯ ಮಾನ್ಯತೆ, ಯುನೆಸ್ಕೋ ಮಾನ್ಯತೆ, ಕೊಡವ ಧಾರ್ಮಿಕ ಸಂಸ್ಕಾರ, ಬಂದೂಕಿಗೆ ಧಾರ್ಮಿಕ ಸ್ವಾತಂತ್ರö್ಯದ ಹಕ್ಕು ಮಾನ್ಯತೆ, ಕೊಡವ ತಕ್ಕನ್ನು ಪರಿಗಣಿಸಿ 8ನೇ ಶೆಡ್ಯೂಲ್‌ಗೆ ಸೇರಿಸುವುದು, ಕಾವೇರಿ ನೀರಿನ ಮೇಲಿನ ಹಕ್ಕು, ಕಾವೇರಿಯನ್ನು ಕೊಡವರ ತೀರ್ಥಯಾತ್ರೆ ಎಂದು ಪರಿಣಿಸುವುದು, ಕೊಡಗಿನೊಳಗೆ ಅನ್ಯ ಪ್ರದೇಶದ ಪಾತಕಿಗಳು ನುಸಳದಂತೆ ತಡೆಯಲು ಇನ್ನರ್‌ಲೈನ್ ಪರ್ಮಿಟ್, ದೇವಟ್ ಪರಂಬ್ ಸೇರಿದಂತೆ, ನಾಲ್ನಡ್ ಅರಮನೆ, ಮಡಿಕೇರಿ ಕೋಟೆ ಇತ್ಯಾದಿ ಕಡೆಗಳಲ್ಲಿ ಹಾಗೂ ಎಲ್ಲೆಲ್ಲಿ ಕೊಡವರ ಹೆಗ್ಗುರುತಿನ ಹೆಜ್ಜೆಗಳಿವೆಯೋ ಅಲ್ಲೆಲ್ಲ ಕೊಡವ ಸ್ಮಾರಕಗಳನ್ನು ನಿಲ್ಲಿಸುವುದು, ಕೊಡವರಿಗೆ ಪ್ರತ್ಯೇಕ ಮತ ಕ್ಷೇತ್ರ ನಿರ್ಮಿಸುವುದು, ಕಳೆದು ಹೋದ ಕೊಡವರ ಭೂಮಿಯನ್ನು ಮರು ಪಡೆಯುವುದು, ಮುಂದಿನ 2026ರ ಭಾರತೀಯ ಜನಗಣತಿಯಲ್ಲಿ ಕೊಡವ ಎಂದು ದಾಖಲಿಸುವುದು ಸೇರಿದಂತೆ ಎಲ್ಲಾ ಹಕ್ಕುಗಳನ್ನು ಸಂವಿಧಾನದ 224, 371 ಮತ್ತು 5, 6ನೇ ಶೆಡ್ಯೂಲ್‌ಗಳಲ್ಲಿ ಪಡೆಯಲು ಎಲ್ಲಾ ರೀತಿಯ ಅವಕಾಶಗಳಿದೆ ಎಂದರು.