ಎಸ್‌ಡಿಪಿಐಯ ಮನ್ಸೂರ್ ಮಾತನಾಡಿ ತಾತ್ಕಾಲಿಕ ಶೆಡ್‌ನಲ್ಲಿ ವ್ಯಾಪಾರಕ್ಕೆ ಒಂದು ವರ್ಷದ ತನಕ ಮಾತ್ರ ಪರವಾನಗಿ ಕೊಡಬೇಕು. ಆದರೆ ಮುಂದುವರಿದಿದೆ. ಇದು ಸರಿಯಲ್ಲ ಎಂದರು. ಇದೇ ವಿಷಯದಲ್ಲಿ ಚರ್ಚೆ ಮತ್ತಷ್ಟು ಮುಂದುವರಿದಾಗ ಬಿಜೆಪಿಯ ಅಪ್ಪಣ್ಣ, ಸತೀಶ್, ಅರುಣ್ ಶೆಟ್ಟಿ, ಶ್ವೇತಾ ಪ್ರಶಾಂತ್ ಮತ್ತಿತರರು ಒಂದೇ ವಿಷಯದ ಬಗ್ಗೆ ದಿನಪೂರ್ತಿ ಸಭೆಯಲ್ಲಿ ಚರ್ಚೆ ಮಾಡುವುದು ಎಷ್ಟು ಸರಿ? ಅಧ್ಯಕ್ಷರು ಯಾವುದಾದರೂ ಒಂದು ತೀರ್ಮಾನ ತೆಗೆದುಕೊಂಡು ಪ್ರಕಟಿಸಬೇಕು. ಇಲ್ಲದಿದ್ದರೆ ನಾವು ಸಭೆಯಲ್ಲಿ ಇರುವುದಿಲ್ಲ ಎಂದರು.