ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾಹಿತಿ ನೀಡಿ ಜಿಲ್ಲೆಯಲ್ಲಿ 3 ತಿಂಗಳಿನಿAದ 5 ವರ್ಷದ ವರೆಗಿನ ಒಟ್ಟು 42,477 ಮಕ್ಕಳಿದ್ದು, ನಗರ ವ್ಯಾಪ್ತಿಯಲ್ಲಿ 4,400, ಗ್ರಾಮೀಣ ಭಾಗದಲ್ಲಿ 37,975 ಮಕ್ಕಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,80,720 ಜನಸಂಖ್ಯೆ ಇದ್ದು, ನಗರ ವ್ಯಾಪ್ತಿಯಲ್ಲಿ 57,727, ಗ್ರಾಮೀಣ ಭಾಗದಲ್ಲಿ 5,24,993 ಜನ ಸಂಖ್ಯೆ ಇದ್ದು, ಇವರಲ್ಲಿ ವಲಸೆ ಜನ ಸಂಖ್ಯೆ 19,164 ಮತ್ತು ಸ್ಥಿರವಾಸಿತ ವಲಸೆ ಜನಸಂಖ್ಯೆಯು 2,05,861 ಇರುತ್ತದೆ. ಇದರಲ್ಲಿ 3 ತಿಂಗಳಿನಿAದ 5 ವರ್ಷದ ಒಳಗಿನ ವಲಸೆ ಮಕ್ಕಳ ಸಂಖ್ಯೆ 4,608 ಮಕ್ಕಳು ಇದ್ದಾರೆ.