ಕೇದಾರನಾಥ ಪ್ರವಾಸಕ್ಕೆ ತೆರಳಿದ್ದ ನಿವೃತ್ತ ಶಿಕ್ಷಕಿ ಸಾವು

bhavani
bhavani
Published on
ವಿರಾಜಪೇಟೆ : ಕೇದಾರನಾಥ ಪ್ರವಾಸಕ್ಕೆ ತೆರಳಿದ್ದ ನಿವೃತ್ತ ಶಿಕ್ಷಕಿ ಎಚ್.ಎಂ.ಭವಾನಿ (60) ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವಿರಾಜಪೇಟೆ ವಿಜಯನಗರದ ದಿ.ವಾಮನ ಅವರ ಪತ್ನಿ ಭವಾನಿ ತಮ್ಮ ಜೊತೆಗಾರರೊಂದಿಗೆ ಕಳೆದ ಸೋಮವಾರ ವಿರಾಜಪೇಟೆಯಿಂದ ಕೇದಾರನಾಥ ಕ್ಷೇತ್ರಕ್ಕೆ ಪ್ರವಾಸ ಕೈಗೊಂಡಿದ್ದರು. ರುದ್ರ ಪ್ರಯಾಗದಲ್ಲಿ ಅವರಿಗೆ ತೀವ್ರ ಹೃದಯಘಾತವಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಮೃತದೇಹ ತರಲು ರುದ್ರಪ್ರಯಾಗಕ್ಕೆ ಕುಟುಂಬದ ಸದಸ್ಯರು ತೆರಳಿದ್ದು, ಭಾನುವಾರ ವಿರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಸಲಿದ್ದಾರೆ. ಭವಾನಿ ಅವರು ಹಾಲುಗುಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಕಳೆದ 10 ದಿನಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net