ಕೊಡಗರಹಳ್ಳಿಯ ಸ್ಕೂಲ್‌ಬಾಣೆಯಲ್ಲಿ ಖಾಸಗಿ ಹಾಗೂ ಅನುದಾನಿತ ಪ್ರೌಢಶಾಲೆೆ, ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ತೆರೆಯಲಾಗಿದೆ. ಕೊಡಗರಹಳ್ಳಿ, ಹೊಸಕೋಟೆ, ನಾಕೂರು ಶಿರಂಗಾಲ, ಸುಂಟಿಕೊಪ್ಪ, ಕೆದಕಲ್, ಹರದೂರು ವ್ಯಾಪ್ತಿಯ ನೂರಾರು ಮಕ್ಕಳು ಸರ್ಕಾರಿ ಬಸ್, ಖಾಸಗಿ ವಾಹನಗಳ ಮುಖಾಂತರ ಆಗಮಿಸಿ ಮಕ್ಕಳು ಈ ಗ್ರಾಮದ ಶಾಲೆಗಳಲ್ಲಿ ವ್ಯಾಸಂಗ ಪಡೆಯುತ್ತಿದ್ದಾರೆ. ಈ ಮಕ್ಕಳು ವಿವಿಧ ಕೇಂದ್ರಗಳಿಗೆ ತೆರಳಲು ರಸ್ತೆ ದಾಟುವುದು ಅನಿವಾರ್ಯ. ಹಾಗಾಗಿ ದಾಟುವಾಗ ಮಕ್ಕಳು ಹುಡುಗಾಟಿಕೆಯಲ್ಲಿ ಅಥವಾ ಆಟವಾಡುತ್ತ ಹೋದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.