ಮೊದಲ ಮಳೆಗೆ ಕುಶಾಲನಗರ ವ್ಯಾಪ್ತಿಯಲ್ಲಿ ಹಾನಿ

 ಶಿರಂಗಾಲ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹೊಸಹಳ್ಳಿ ನಿವಾಸಿ ಎಸ್.ಎಚ್. ಸುಂದರ ಎಂಬುವರ ಮನೆಯ ಛಾವಣಿ ಗಾಳಿ ಮಳೆಗೆ ಸಂಪೂರ್ಣ ಹಾನಿಯಾಗಿದೆ.

Published on
ಕುಶಾಲನಗರ:
ತಾಲೂಕು ಕೇಂದ್ರ ಕುಶಾಲನಗರ ಪಟ್ಟಣ ಸೇರಿದಂತೆ ಗಡಿ ಗ್ರಾಮಗಳಾದ ಹೆಬ್ಬಾಲೆ, ತೊರೆನೂರು, ಶಿರಂಗಾಲ ಭಾಗದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದ ಭಾರಿ ಹಾನಿ ಆಗಿದೆ.
ಶಿರಂಗಾಲ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹೊಸಹಳ್ಳಿ ನಿವಾಸಿ ಎಸ್.ಎಚ್. ಸುಂದರ ಎಂಬವರ ಮನೆಯ ಛಾವಣಿ ಗಾಳಿ ಮಳೆಗೆ ಸಂಪೂರ್ಣ ಹಾನಿಯಾಗಿದ್ದು, ಜೋರಾಗಿ ಸುರಿದ ಮಳೆಯಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ನಲ್ವತ್ತು ಚೀಲ ಭತ್ತ ಹಾಗೂ ರಾಗಿ, ಮನೆಯ ಸಾಮಗ್ರಿಗಳು ಮಳೆ ನೀರಿಗೆ ಸಿಲುಕಿ ಹಾನಿಯಾಗಿದೆ. ಮನೆ ತುಂಬೆಲ್ಲಾ ನೀರು ನಿಂತ ಪರಿಣಾಮ ಧಾನ್ಯಗಳ ಚೀಲ ನೀರಿನಿಂದ ಅವರಿಸಿ ಹಾನಿಯಾಗಿದೆ. ದನದ ಕೊಟ್ಟಿಗೆಗೂ ಹಾನಿಯಾಗಿದೆ. ಗ್ರಾಮದ ಹರೀಶ್ ಹಾಗೂ ಪಾಲ್ಗುಣಿ ಎಂಬುವವರ ಮನೆ ಮೇಲೆ ತೆಂಗಿನ ಮರ ಮುರಿದು ಬಿದ್ದ ಹಿನ್ನೆಲೆ ಮನೆಗೆ ಅಪಾರ ಹಾನಿ ಉಂಟಾಗಿದೆ. ಹೊಗೆಸೊಪ್ಪು ಮನೆ ಹಾಗೂ ಕೊಟ್ಟಿಗೆಗೂ ಹಾನಿ ಉಂಟಾಗಿದೆ. ಮರಬಿದ್ದ ಪರಿಣಾಮ ಮನೆ ಮುಂದೆ ಸಿಲ್ಲಿಸಿದ್ದ ಹೊಸ ಟ್ರಾಕ್ಟರ್ ಗೂ ಹಾನಿಯಾಗಿದೆ. ಮನೆ ಮೇಲೆ ಬಿದ್ದ ಮರವನ್ನು ಅರಣ್ಯ ಸಿಬ್ಬಂದಿ ತೆರವುಗೊಳಿಸಿದರು. ಅದೃಷ್ಟವಶಾತ್ ಮನೆಯಲ್ಲಿದ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದಾರೆ. ಮನೆ ಬಳಿ ಇದ್ದ ವಿದ್ಯುತ್ ಕಂಬ ಕೂಡ ಮುರಿದು ಬಿದ್ದಿದೆ.
ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕ ಅಳುವಾರದಲ್ಲಿ ಪುಷ್ಪವೇಣೆ ಚಂದ್ರಶೇಖರ್ ಎಂಬುವರಿಗೆ ಸೇರಿದ ಮನೆಯ ಛಾವಣಿ ಭಾರಿ ಗಾಳಿ ಮಳೆಗೆ ಹಾರಿ ಹೋಗಿದೆ. ಸ್ಧಳಕ್ಕೆ ಕುಶಾಲನಗರ ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ, ಕಂದಾಯ ಪರಿವೀಕ್ಷಣಾಧಿಕಾರಿ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಪೀರ್ ಮಹಮ್ಮದ್ ಭೇಟಿ ನೀಡಿದ್ದರು.
ಕುಶಾಲನಗರ ಪಟ್ಟಣದಲ್ಲಿ ಹಾಗೂ ಹೆಬ್ಬಾಲೆ, ತೊರೆನೂರು, ಗುಡ್ಡೆಹೊಸೂರು ಹಾಗೂ ಚಿಕ್ಕ ಅಳುವಾರ ಗ್ರಾಮಗಳಲ್ಲಿ ದಿಢೀರನೆ ಜೋರಾಗಿ ಸುರಿಯಿತು. ಗುಡ್ಡೆಹೊಸೂರು, ಅಳುವಾರ ಹಾಗೂ ತೊರೆನೂರು ಭಾಗದಲ್ಲಿ ಅಲಿಕಲ್ಲು ಸಹಿತ ಮಳೆ ಬಂತು. ಜೋರಾಗಿ ಬಂದ ಮಳೆಯಿಂದ ಚರಂಡಿಗಳಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯಿತು. ಜೋರು ಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆ ರೈತರ ಕೃಷಿ ಚಟುವಟಿಕೆಗೆ ಹಾಗೂ ಶುಂಠಿ ಕೃಷಿಕರಿಗೂ ಸಂತಸ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net