ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಎದುರಾಗಿರುವ ತೈಲ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ನಿಟ್ಟೂರು ಗ್ರಾಮದ ಯುವಕರು ಸುಮಾರು 200 ಕಿಮೀ ಸೈಕಲ್ ಸವಾರಿ ಮಾಡಿದ್ದಾರೆ. ದೇಶದಲ್ಲಿ ತಲೆದೋರಿರುವ ತೈಲ ಬಿಕ್ಕಟ್ಟಿನ ಬಗ್ಗೆ ಜನರಿಗೆ ಅರಿವು ಮೂಡಸಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ನಿಟ್ಟೂರು ಗ್ರಾಮದ ಯುವಕರಾದ ಮುಕ್ಕಾಟಿರ ರೋಶನ್ ದೇವಯ್ಯ, ಕಾಟಿಮಾಡ ಶಮನ್ ಪೊನ್ನಣ್ಣ, ಮಾಚಂಗಡ ಪ್ರನಾಮ್ ಕರುಂಬಯ್ಯ ಬುಧವಾರ ಬಾಳೆಲೆಯಿಂದ ಮೈಸೂರು ತನಕ ತೆರಳಿ ಮತ್ತೆ ಅದೇ ಮಾರ್ಗವಾಗಿ ಬಾಳೆಲೆಗೆ ಹಿಂದಿರುಗಿ ಇನ್ನೂರು ಕಿಲೋಮೀಟರ್ ಪೂರೈಸಿದ್ದಾರೆ. ಇಂಧನ ಉಳಿಸಬೇಕು. ಸಾರ್ವಜನಿಕ ವಾಹಾನಗಳಾದ ರೈಲು, ಬಸ್ ಹೆಚ್ಚು ಬಳಸಬೇಕು, ಹೆಚ್ಚು ಹೆಚ್ಚು ಸೈಕಲ್ ಉಪಯೋಗಿಸಬೇಕು ಎಂದು ಈ ಯುವಕರು ತಮ್ಮ ಸೈಕಲ್ ಸವಾರಿ ವೇಳೆ ಜಾಗೃತಿ ಮೂಡಿಸಿದರು.