ಕೊಡಗು ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಿವೈಸ್‌ಪಿ ಐ.ಪಿ. ಮೇದಪ್ಪ ತಂಡ ತನಿಖೆ ಮುಂದುವರಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಈ ಬ್ಯಾಂಕ್ ಖಾತೆಗಳಲ್ಲಿ ಸುಮಾರು 35 ಲಕ್ಷ ರೂ.ಗೂ ಹೆಚ್ಚಿನ ಕಾನೂನುಬಾಹಿರ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್ ಖಾತೆಗಳನ್ನು ಇತರರು ಬಳಸಲು ನೀಡಬಾರದು. ಬ್ಯಾಂಕ್ ಖಾತೆಯನ್ನು ಬೇರೆಯವರಿಗೆ ನೀಡಿ, ಅದನ್ನು ಕಾನೂನು ಬಾಹಿರ ಕೃತ್ಯಗಳಿಗೆ ಉಪಯೋಗಿಸಿರುವುದು ಕಂಡುಬAದಲ್ಲಿ, ಖಾತೆದಾರರ ವಿರುದ್ಧವೇ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.